ಭಾರತ, ಮಾರ್ಚ್ 11 -- ಎಂದಾದರೂ ಸೌತೆಕಾಯಿಯಿಂದ ಇಡ್ಲಿ ತಯಾರಿಸಿದ್ದೀರಾ? ಈ ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಪ್ಪಿಸಲು ಬೆಳಗ್ಗಿನ ಉಪಾಹಾರಕ್ಕೆ ಸೌತೆಕಾಯಿ ಇಡ್ಲಿ ಮಾಡಬಹುದು. ಸೌತೆಕಾಯಿ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ವಿಶೇಷವಾಗಿ ಬೇಸಿಗೆಯಲ್ಲಿ ಬಿಸಿಲಿನ ತಾಪ ಮತ್ತು ನಿರ್ಜಲೀಕರಣದಿಂದ ದೇಹವನ್ನು ರಕ್ಷಿಸಲು ಸೌತೆಕಾಯಿ ಉತ್ತಮ ಆಹಾರ ಪದಾರ್ಥವಾಗಿದೆ. ಸೌತೆಕಾಯಿಯನ್ನು ಹಾಗೆಯೇ ತಿನ್ನಬಹುದು. ಆದರೆ, ಎಲ್ಲರೂ ಇದನ್ನು ಪ್ರತಿ ಬಾರಿಯೂ ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಇದರ ಇಡ್ಲಿ ತಯಾರಿಸಬಹುದು. ವಿಶೇಷವಾಗಿ ಮಕ್ಕಳು ಸೌತೆಕಾಯಿ ತಿನ್ನದಿದ್ದರೆ ಅವರಿಗಾಗಿ ಈ ಖಾದ್ಯ ತಯಾರಿಸಿ ಕೊಡಬಹುದು. ಸೌತೆಕಾಯಿ ಇಡ್ಲಿ ಪಾಕವಿಧಾನ ತುಂಬಾ ಸರಳ. ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಸೌತೆಕಾಯಿ, ಒಂದು ಕಪ್ ಅಕ್ಕಿ ರವೆ ಅಥವಾ ಇಡ್ಲಿ ರವೆ, ಒಂದು ಕಪ್ ತೆಂಗಿನ ತುರಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಅಡುಗೆ ಸೋಡಾ, ಒಂದು ಚಮಚ ಕೊಬ್ಬರಿ (ನೀವು ಬಳಸುವ) ...