ಭಾರತ, ಫೆಬ್ರವರಿ 6 -- ದೇಹದ ದುರ್ಗಂಧ ಅಥವಾ ದೇಹದ ದುರ್ವಾಸನೆ ಕೆಲವರನ್ನು ಬಿಡದೇ ಕಾಡುವ ಸಮಸ್ಯೆಯಾಗಿರುತ್ತದೆ. ಇದರಿಂದ ಅತಿಯಾದ ಸಂಕೋಚ, ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಇದು ಆತ್ಮವಿಶ್ವಾಸದ ಕೊರತೆಗೂ ಕಾರಣವಾಗಬಹುದು. ಇದಕ್ಕೆ ಪ್ರಮುಖ ಕಾರಣ ಬ್ಯಾಕ್ಟೀರಿಯಾ ಹಾಗೂ ಬೆವರು.

ವಿಪರ್ಯಾಸವೆಂದರೆ, ಅದೆಷ್ಟೋ ಜನರಿಗೆ ತಮ್ಮ ದೇಹದಿಂದ ಈ ರೀತಿಯ ವಾಸನೆ ಬರುತ್ತಿದೆ ಎಂಬ ಬಗ್ಗೆ ಅರಿವೇ ಇರುವುದಿಲ್ಲ, ಇನ್ನು ಕೆಲವರು ಅರಿತಿದ್ದರೂ ಏನು ಮಾಡಬೇಕೆಂದು ತಿಳಿಯದೇ ಸುಮ್ಮನಿರುತ್ತಾರೆ. ಆದರೆ ಇದರಿಂದ ಅಕ್ಕಪಕ್ಕ ಇರುವವರಿಗೆ ಹಿಂಸೆ ತಪ್ಪಿದ್ದಲ್ಲ. ದೇಹ ದುರ್ಗಂಧ ಸಾಮಾನ್ಯ ಸಮಸ್ಯೆಯಾದರೂ ಇದಕ್ಕೆ ಕಾರಣಗಳು ಹಲವಿರುತ್ತದೆ.

ಬದಲಾದ ಹವಾಮಾನ, ಹಾರ್ಮೋನ್‌ಗಳ ಬದಲಾವಣೆ, ಅನುವಂಶಿಕವಾಗಿ ಬಂದಂತಹ ಕೆಲವು ಅಂಶಗಳು ಮತ್ತು ಇತರೆ ಕೆಲವು ಆರೋಗ್ಯ ಸಮಸ್ಯೆಗಳು ದೇಹದ ದುರ್ವಾಸನೆಯನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದರೆ ಆರೋಗ್ಯಕರ ಅಭ್ಯಾಸಗಳು, ಆಹಾರ ನಿಯಂತ್ರಣ ಮತ್ತು ಕೆಲವು ಉಪಯುಕ್ತ ಸಾಮಗ್ರಿಗಳ ಬಳಕೆಯ ಮೂಲಕ ಇದನ್ನು ಸುಲಭವಾಗಿ ನಿಯ...