ಭಾರತ, ಮಾರ್ಚ್ 12 -- ಪಾಕಿಸ್ತಾನ ಕ್ರಿಕೆಟ್ ಮಂಡಳಿ ದೇಶೀಯ ಕ್ರಿಕೆಟ್​​ ಆಟಗಾರರ ಪಂದ್ಯದ ಶುಲ್ಕದ ಜೊತೆಗೆ ಸೌಲಭ್ಯಗಳನ್ನು ಕಡಿಮೆ ಮಾಡುತ್ತಿದೆ ಎಂದು ವರದಿಯಾಗಿದೆ. ಪಿಟಿಐ ವರದಿ ಪ್ರಕಾರ, ಮುಂಬರುವ ರಾಷ್ಟ್ರೀಯ ಟಿ 20 ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುವ ಕ್ರಿಕೆಟಿಗರ ಪಂದ್ಯದ ಶುಲ್ಕವನ್ನು ಪಿಸಿಬಿ ಪ್ರತಿ ಪಂದ್ಯಕ್ಕೆ 100,000 ಪಾಕಿಸ್ತಾನಿ ರೂಪಾಯಿಗಳಿಂದ 10,000ಕ್ಕೆ ಇಳಿಸಿದೆ. ಮಾರ್ಚ್ 14ರಿಂದ ದೇಶೀಯ ಟೂರ್ನಿ ಆರಂಭವಾಗಲಿದೆ.

ಪಿಸಿಬಿಯ ದೇಶೀಯ ಕ್ರಿಕೆಟ್ ಮುಖ್ಯಸ್ಥ ಅಬ್ದುಲ್ಲಾ ಖುರ್ರುಮ್ ನಿಯಾಜಿ ಕಳೆದ ಕೆಲವು ತಿಂಗಳುಗಳಿಂದ ದೇಶೀಯ ಆಟಗಾರರಿಗೆ ಸೌಲಭ್ಯಗಳನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಆಟಗಾರರಿಗೆ ಮೊದಲು ಪಂಚತಾರಾ ಮತ್ತು 4 ಸ್ಟಾರ್ ಹೋಟೆಲ್​​ಗಳಲ್ಲಿ ವಸತಿ ಸೌಕರ್ಯ ನೀಡಲಾಗುತ್ತಿತ್ತು. ಈಗ ಅವರಿಗೆ ಅಗ್ಗದ ವಸತಿ ಸೌಕರ್ಯವನ್ನು ನೀಡಲಾಗುತ್ತಿದೆ.

ಶುಲ್ಕದ ಜೊತೆಗೆ ಅವರಿಗೆ ವಿಮಾನ ಪ್ರಯಾಣವನ್ನು ಸಹ ಕಡಿಮೆ ಮಾಡಲಾಗಿದೆ" ಎಂದು ಅವೇ ಮೂಲಗಳು ತಿಳಿಸಿವೆ. ಹೆಚ್ಚುವ...