Bengaluru, ಫೆಬ್ರವರಿ 28 -- ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ಚಿತ್ರನಟ ದರ್ಶನ್‌ಗೆ ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಹೈಕೋರ್ಟ್‌ ಅವಕಾಶ ಕಲ್ಪಿಸಿದೆ. ಆದರೆ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಿದೆ. ದರ್ಶನ್‌ ಅವರನ್ನು ನಂಬಿ ಬಂಡವಾಳ ಹೂಡಿದ್ದ ನಿರ್ಮಾಪಕರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹೀಗೆ ದರ್ಶನ್‌ಗೆ ರಿಲೀಫ್‌ ಸಿಗುತ್ತಿದ್ದಂತೆ, ಡೆವಿಲ್‌ ಸಿನಿಮಾ ಕೆಲಸಗಳು ಶುರುವಾಗಬಹುದೇ ಎಂಬ ಚರ್ಚೆಗಳೂ ಮುನ್ನೆಲೆಗೆ ಬರುತ್ತಿವೆ.

ತಾನು ಸಿನಿಮಾ ನಟನಾಗಿದ್ದು ಚಿತ್ರಿಕರಣಕ್ಕಾಗಿ ಬೆಂಗಳೂರು ಬಿಟ್ಟು ಬೇರೆ ಪ್ರದೇಶಗಳಿಗೆ ಹೋಗಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ನಟ ದರ್ಶನ್‌ಗೆ ಮಾತ್ರ ಷರತ್ತು ಸಡಿಲಿಸಿ ಅನುಮತಿ ನೀಡಿದೆ. ನ್ಯಾ. ವಿಶ್ವಜಿತ್ ಶೆಟ್ಟಿ ಅವರ ಪೀಠ, 'ದರ್ಶನ್ ದೇಶದೊಳಗೆ ಎಲ್ಲಿಗೆ ಬೇಕಾದರೂ ಹೋಗಬಹುದು' ಎಂದು ಆದೇಶ ನೀಡಿದೆ.

ರೆಗ್ಯುಲರ್‌ ಜಾಮೀನು ನೀಡುವಾಗ ಹೈಕೋರ್ಟ...