Bengaluru, ಏಪ್ರಿಲ್ 18 -- ಮದುವೆ ಎಂಬುದು ಒಂದು ಅರ್ಥಪೂರ್ಣ ಬಾಂಧವ್ಯ ಎಂದು ಹಿಂದೆ ಪರಿಗಣಿಸಲಾಗುತ್ತಿತ್ತು. ಆದರೆ ಇಂದಿನ ತಲೆಮಾರಿನಲ್ಲಿ ಮದುವೆಯ ಅರ್ಥವೇ ಬದಲಾಗುತ್ತಿದೆ. ಪ್ರೀತಿ ಮತ್ತು ಸಂಗಾತಿಗೆ ಇನ್ನೂ ಮಹತ್ವ ಇದ್ದರೂ, ಇತ್ತೀಚಿನ ಯುವ ಜನತೆ ವೈವಾಹಿಕ ಜೀವನದಲ್ಲಿ ಹಲವು ಹೊಸ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಸ್ಪರ ಪ್ರೀತಿ, ಕಾಳಜಿ, ಆತ್ಮೀಯತೆ, ಸಲುಗೆ ಬದಲಾಗಿ ಬದಲಾಗುತ್ತಿರುವ ಜೀವನಶೈಲಿ, ಸಾಮಾಜಿಕ ಮೌಲ್ಯಗಳು, ತಂತ್ರಜ್ಞಾನ ಹಾಗೂ ಸ್ವತಂತ್ರದತ್ತ ಒಲವು ಹೆಚ್ಚಾಗುತ್ತಿದೆ. ವಿಚ್ಛೇದನದ ಮುಖ್ಯ ಕಾರಣಗಳು ಕೂಡ ಹೊಸ ರೀತಿಯಲ್ಲಿ ಹೊರಬರುತ್ತಿವೆ. ಇಲ್ಲಿ ಇಂದಿನ ತಲೆಮಾರಿನಲ್ಲಿ ವಿಚ್ಛೇದನಕ್ಕೆ ಕಾರಣವಾಗುವ ಪ್ರಮುಖ ಅಂಶಗಳನ್ನು ತಿಳಿಸಿದ್ದೇವೆ.

ಸರಿಯಾದ ಅಥವಾ ಸ್ಪಷ್ಟ ಸಂವಹನ ಇಲ್ಲದಿರುವುದು. ಭಾವನೆಗಳು ಮತ್ತು ಅಗತ್ಯತೆಗಳನ್ನು ಹಂಚಿಕೊಳ್ಳದಿರುವುದು. ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಬದುಕುತ್ತಿರುವುದು. ಇಷ್ಟ ಕಷ್ಟಗಳ ಬಗ್ಗೆ ಅರಿತುಕೊಳ್ಳುವ ಪ್ರಯತ್ನವನ್ನೇ ನಡೆಸದಿರುವುದು.

ಮಾನಸಿಕ ಒತ...