ಭಾರತ, ಜೂನ್ 11 -- ಕೆಲವರು ಪ್ರತಿನಿತ್ಯ ದೇವಾಲಯಕ್ಕೆ ತೆರಳುತ್ತಾರೆ. ಬಹುಕಾಲ ದೇವಾಲಯದಲ್ಲಿ ಹೆಚ್ಚಿನ ವೇಳೆಯನ್ನು ಕಳೆಯುತ್ತಾರೆ. ಆದರೆ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಇದಕ್ಕೆ ಕಾರಣ ನಾವು ಮಾಡುವ ಹತ್ತು ಹಲವು ತಪ್ಪುಗಳು. ಬೆಳಗಿನ ವೇಳೆ ದೇವಾಲಯಕ್ಕೆ ಹೋಗುವ ಮುನ್ನ ಸ್ನಾನಾದಿಗಳನ್ನು ಮುಗಿಸಿರಬೇಕು. ಆದರೆ ದೇವಾಲಯದಿಂದ ಮನೆಗೆ ಮರಳಿದ ನಂತರ ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡಬಾರದು. ಸ್ನಾನವನ್ನು ಮಾಡಿದಲ್ಲಿ ನಾವು ಪೂಜೆ ಮಾಡಿಸಿದ ಫಲಗಳು ಲಭಿಸದೇ ಹೋಗುತ್ತದೆ. ಸಂಜೆಯ ವೇಳೆ ದೇವಾಲಯಕ್ಕೆ ತೆರಳುವವರು ಸ್ನಾನವನ್ನು ಮಾಡಿ ದೇವಾಲಯಕ್ಕೆ ತೆರಳಬೇಕೆಂಬ ನಿಯಮವಿಲ್ಲ. ಅನಿವಾರ್ಯವಾದಲ್ಲಿ ಸೂರ್ಯಾಸ್ತದ ಮುನ್ನ ಸ್ನಾನವನ್ನು ಮುಗಿಸಿ ದೇವಾಲಯಕ್ಕೆ ತೆರಳಬೇಕು. ಶ್ರೀ ಸೂರ್ಯದೇವರ ಮತ್ತು ಶ್ರೀ ನಾಗಪ್ಪನಿಗೆ ರಾತ್ರಿಯ ವೇಳೆ ಪೂಜೆಯನ್ನು ಸಲ್ಲಿಸಬಾರದು. ಆದರೆ ಸೂರ್ಯನಿಗೆ ಸೂರ್ಯಾಸ್ತದ ಮುನ್ನ ಪೂಜೆಯನ್ನು ಸಲ್ಲಿಸಬಹುದು. ಆದರೂ ಸೂರ್ಯನ ಪೂಜೆಯನ್ನು ಬೆಳೆಗಿನ ವೇಳೆ ಮಾಡುವುದು ಒಳ್ಳೆಯದು. ದೇವಾಲಯದಲ್ಲಿ ಕತ್ತಲಿರುವ ವೇಳೆಯಲ್...