ಭಾರತ, ಏಪ್ರಿಲ್ 17 -- ದೆಹಲಿ: ಆಗಾಗ ಮೆಟ್ರೋದಲ್ಲಿ ಆಶ್ಚರ್ಯಕರ ಸಂಗತಿಗಳು ನಡೆಯುತ್ತಲೇ ಇರುತ್ತದೆ. ಒಂದೊಂದು ಬಾರಿಯೂ ಒಂದೊಂದು ರೀತಿಯ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಹೆಚ್ಚಿನ ಸುದ್ದಿಗಳು ಮೆಟ್ರೋ ನಿಯಮ ಉಲ್ಲಂಘನೆಯ ಬಗ್ಗೆಯೇ ಇರುತ್ತದೆ. ಈ ಬಾರಿಯೂ ಅಂತಹದೇ ಒಂದು ಸುದ್ದಿ ಹಾಗೂ ಆಶ್ಚರ್ಯಕರ ವಿಡಿಯೋ ವೈರಲ್ ಆಗುತ್ತಿದೆ. ಅದೇನೆಂದರೆ ಒಂದಷ್ಟು ಮಹಿಳೆಯರು ಮೆಟ್ರೋದಲ್ಲಿ ಕುಳಿತುಕೊಂಡು ಭಜನೆ ಮಾಡುತ್ತಿರುತ್ತಾರೆ. ಆ ವಿಡಿಯೋ ವೈರಲ್ ಆಗಿದೆ. ಮುಂದೇನಾಗಿದೆ ಎಂಬುದನ್ನು ಗಮನಿಸಿ.

ಒಂದಷ್ಟು ಜನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾ ಇರುತ್ತಾರೆ. ಅದೇ ಸಂದರ್ಭದಲ್ಲಿ ಎಲ್ಲರೂ ಡೋಲಕ್ ಹಾಗೂ ತಾಳಗಳನ್ನು ಹಿಡಿದುಕೊಂಡು ಭಜನೆ ಮಾಡಲು ಆರಂಭಿಸುತ್ತಾರೆ. ಭಜನೆ ಮಾಡುತ್ತಾ ಮಾಡುತ್ತಾ ಏರುಧ್ವನಿಯಲ್ಲಿ ಎಲ್ಲರಿಗೂ ಕೇಳುವಂತೆ ಭಜನೆ ಮಾಡುತ್ತಾ ಇರುತ್ತಾರೆ. ಇನ್ನು ಸೀಟ್‌ ಸಿಗದೇ ಇದ್ದ ಕೆಲವರು ನೆಲದ ಮೇಲೆ ಕುಳಿತುಕೊಂಡು ಡೋಲಕ್ ಭಾರಿಸುತ್ತಾ ಇರುತ್ತಾರೆ. ಅದೇ ಮೆಟ್ರೋ...