ಭಾರತ, ಫೆಬ್ರವರಿ 5 -- Delhi Exit Polls: ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗಿವೆ. ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು (ಫೆ 1) ಇಂದು ಪೂರ್ಣಗೊಂಡ ಬೆನ್ನಿಗೆ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಬಿಜೆಪಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರ ಹಿಡಿಯವ ಸುಳಿವು ನೀಡಿವೆ. ಇನ್ನೊಂದೆಡೆ, ಎರಡು ಅವಧಿಗೆ ದೆಹಲಿಯ ಆಡಳಿತ ಚುಕ್ಕಾಣಿ ಹಿಡಿದು ದೆಹಲಿಗರನ್ನು ಒಲಿಸುವಂತೆ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದ ಆಮ್ ಆದ್ಮಿ ಪಾರ್ಟಿಗೆ ಈ ಬಾರಿ ಸಂಕಷ್ಟ ಹೆಚ್ಚಾಗಿದೆ. ಎರಡು ಅವಧಿಗೆ ವಿಪಕ್ಷವೇ ಇಲ್ಲದಂತೆ ಬಹುಮತ ಪಡೆದಿದ್ದ ಆಮ್ ಆದ್ಮಿ ಪಾರ್ಟಿಗೆ ಈ ಬಾರಿ ಬಿಜೆಪಿಯಿಂದ ಭಾರಿ ಪೈಪೋಟಿ ಎದುರಾಗುವ ಸುಳಿವನ್ನು ದೆಹಲಿಯ ಎಕ್ಸಿಟ್ ಪೋಲ್‌ ಫಲಿತಾಂಶಗಳು ನೀಡಿವೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಗಮನಿಸಬೇಕಾದ 5 ಮುಖ್ಯ ಅಂಶಗಳಿವು.

1) ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶ: ದೆಹಲಿ ವಿಧಾನ ಸಭಾ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಇಂದು (ಫೆ 5) ಮತದಾನ ಪೂರ್ಣಗೊಂಡಿದ್ದು, ಫೆ 8 ರಂದು ಫಲಿತಾಂಶಕ್ಕ...