नई दिल्ली, ಫೆಬ್ರವರಿ 15 -- ದೆಹಲಿ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಆಮ್ ಆದ್ಮಿ ಪಾರ್ಟಿ (ಎಎಪಿ)ಗೆ ಮತ್ತೊಂದು ಆಘಾತ ಎದುರಾಗಿದೆ. ದೆಹಲಿ ಪಾಲಿಕೆ (ಎಂಸಿಡಿ)ಯ ತನ್ನ ಸದಸ್ಯರ ಪೈಕಿ ಮೂವರನ್ನು ಅದು ಕಳೆದುಕೊಂಡಿದೆ. ಆಮ್ ಆದ್ಮಿ ಪಾರ್ಟಿಯ ಮೂವರು ಪಾಲಿಕೆ ಸದಸ್ಯರು ಇಂದು (ಫೆ 15) ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾದರು. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿದರು. ಏಪ್ರಿಲ್‌ನಲ್ಲಿ ದೆಹಲಿ ಪಾಲಿಕೆಯ ಮೇಯರ್ ಚುನಾವಣೆಯ ನಡೆಯಲಿರುವ ಕಾರಣ ಈ ಪಕ್ಷ ಸೇರ್ಪಡೆ ಮಹತ್ವ ಪಡೆದುಕೊಂಡಿದೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಆಮ್ ಆದ್ಮಿ ಪಾರ್ಟಿಯ ಸದಸ್ಯರಾಗಿದ್ದ ಅನಿತಾ ಬಸೋಯಾ, ನಿಖಿಲ್ ಚಾಪರಾನ, ಧರಂವೀರ್ ಸಿಂಗ್ ಅವರು ಬಿಜೆಪಿ ದೆಹಲಿ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದರು. ಸಚ್‌ದೇವಾ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಾಚ...