ಭಾರತ, ಫೆಬ್ರವರಿ 8 -- ನವದೆಹಲಿ: ದೆಹಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪೂರ್ತಿಯಾಗಿ ಪ್ರಕಟವಾಗಿದೆ. ದೆಹಲಿಯ ವಿಧಾನಸಭೆಯ 70 ಸ್ಥಾನಗಳ ಪೈಕಿ ಬಿಜೆಪಿಗೆ 48 ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ)ಗೆ 22 ಸ್ಥಾನಗಳು ಸಿಕ್ಕಿವೆ. ಇದರೊಂದಿಗೆ 27 ವರ್ಷಗಳ ಬಳಿಕ ಬಿಜೆಪಿಗೆ ದೆಹಲಿಯ ಆಡಳಿತ ಚುಕ್ಕಾಣಿ ಲಭಿಸಿದೆ. ಇದೇ ಮೊದಲ ಬಾರಿಗೆ ಬಿಜೆಪಿಗೆ ಭಾರತ ಸರ್ಕಾರ ಹಾಗೂ ದೆಹಲಿ ಸರ್ಕಾರ ಒಟ್ಟಿಗೆ ನಡೆಸುವ ಅವಕಾಶ ಸಿಕ್ಕಿದೆ. ಡಬಲ್ ಎಂಜಿನ್ ಸರ್ಕಾರಕ್ಕೆ ಮತದಾರರು ಅವಕಾಶ ನೀಡಿದ್ದು, ಮತಗಟ್ಟೆ ಸಮೀಕ್ಷೆ ಸಂದರ್ಭದಲ್ಲೇ ಬಿಜೆಪಿ ಗೆಲುವಿನ ಸುಳಿವನ್ನು ನೀಡಿದ್ದರು. ದೆಹಲಿ ಚುನಾವಣೆ 2025ಕ್ಕೆ ಸಂಬಂಧಿಸಿದ ಎಕ್ಸಿಟ್ ಪೋಲ್ ಮತ್ತು ನೈಜ ಫಲಿತಾಂಶವನ್ನು ಹೋಲಿಸಿ ನೋಡುವುದಕ್ಕೆ ಇದು ಸರಿಯಾದ ಸಂದರ್ಭ. ಇಲ್ಲಿದೆ ಆ ತುಲನಾತ್ಮಕ ವಿವರ.

1) ಮ್ಯಾಟ್ರಿಜ್‌ ಎಕ್ಸಿಟ್ ಪೋಲ್ - 32-37 (ಎಎಪಿ), 35-40 (ಬಿಜೆಪಿ), 0-1 (ಕಾಂಗ್ರೆಸ್)

2) ಪೀಪಲ್ಸ್ ಪಲ್ಸ್ ಸಮೀಕ್ಷೆ - 10- 19 (ಎಎಪಿ), 50-60 (ಬಿಜೆಪಿ)

3) ಜೆವಿಸಿ ಸಮೀಕ್ಷೆ 32-37 (ಎಎಪಿ), ...