ಭಾರತ, ಫೆಬ್ರವರಿ 8 -- Delhi election 2025 Results: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಸತತ ಮೂರು ಸಲ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ 4 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಪರಾಜಿತರಾಗಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮತಗಳನ್ನು ಎಣಿಸಿದ ಮೊದಲ ಎರಡು ಗಂಟೆಗಳಲ್ಲಿ ಹಿಂದುಳಿದಿದ್ದರು. ಆದಾಗ್ಯೂ, ಅರವಿಂದ್ ಕೇಜ್ರಿವಾಲ್ ಅವರು 254 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು ಎಂದು ಬೆಳಿಗ್ಗೆ 10.05 ಕ್ಕೆ ಚುನಾವಣಾ ಆಯೋಗದ ಮಾಹಿತಿ ನೀಡಿತ್ತು.. ಬೆಳಿಗ್ಗೆ 11 ಗಂಟೆ ಸುಮಾರಿಗೆ ಪರ್ವೇಶ್ ವರ್ಮಾ ಬಿಜೆಪಿ ನಾಯಕ 238 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯ ಎರಡು ಸುತ್ತು ಬಾಕಿ ಇರುವಾಗ 3000 ಅಂತರದ ಮುನ್ನಡೆಯನ್ನು ಪರ್ವೇಶ್ ವರ್ಮಾ ಕಾಯ್ದುಕೊಂಡಿದ್ದರು.

ಮಾಹಿತಿ ಅಪ್ಡೇಟ್ ಆಗುತ್ತಿದೆ.

Published by HT Digital Content Services with permission from...