ಭಾರತ, ಫೆಬ್ರವರಿ 8 -- ನವದಹಲಿ: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 70 ಸ್ಥಾನಗಳ ಪೈಕಿ 40 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ, ತಾನು ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಬೇಕಾಗಿದೆ. ದೆಹಲಿ ಮತದಾರರಿಗೆ ಬಿಜೆಪಿ, ಆರೋಗ್ಯ, ಶಿಕ್ಷಣ, ಎಲ್‌ಪಿಜಿ ಸಿಲಿಂಡರ್ ಸೇರಿ ಹತ್ತಾರು ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಅವುಗಳನ್ನು ದಾಖಲಿಸಿದ್ದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಫ್ರೀ ಫ್ರೀ ಫ್ರೀ ಎಂದು ಬಿಜೆಪಿ ದೆಹಲಿಯಲ್ಲಿ ಮತದಾರರನ್ನು ಓಲೈಸಲು ಘೋಷಿಸಿತ್ತು.

ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ "ವಿಕಸಿತ ದೆಹಲಿ ಸಂಕಲ್ಪ ಪತ್ರ- 2025" ಎಂಬ ಶೀರ್ಷಿಕೆಯ ಪ್ರಣಾಳಿಕೆಯನ್ನು ಬಿಜೆಪಿ ಪ್ರಕಟಿಸಿದೆ. ಅದರಲ್ಲಿ ವಿಕಸಿತ ದೆಹಲಿಗಾಗಿ 16 ಸಂಕಲ್ಪಗಳನ್ನು ಅದು ಉಲ್ಲೇಖಿಸಿದೆ. ಈ ಸಂಕಲ್ಪ ಪತ್ರದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿಯನ್ನೂ ಒದಗಿಸಿದೆ. ಅಷ್ಟೇ ...