ಭಾರತ, ಫೆಬ್ರವರಿ 5 -- Delhi Exit Poll Results 2025: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯಿತು. ಇಂದು (ಫೆ 1) ಬೆಳಿಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು. ಈಗ ದೆಹಲಿ ಚುನಾವಣೆಯ ಮತದಾನೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್‌) ಫಲಿತಾಂಶಗಳು ಪ್ರಕಟವಾಗಿದ್ದು, ಎಎಪಿ ಮತ್ತು ಬಿಜೆಪಿ ನಡುವೆ ಹೆಚ್ಚಿನ ಪೈಪೋಟಿಯನ್ನು ತೋರಿಸುತ್ತಿವೆ.

ದೆಹಲಿಯಲ್ಲಿ ಇಂದು (ಫೆ 1) 70 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಸಂಜೆ 5 ಗಂಟೆ ತನಕದ ಮಾಹಿತಿ ಪ್ರಕಾರ ಶೇಕಡ 58 ಮತದಾನವಾಗಿದೆ. ಈಶಾನ್ಯ ದೆಹಲಿಯಲ್ಲಿ ಗರಿಷ್ಠ ಶೇಕಡ 68.83 ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದೆಹಲಿಯಲ್ಲಿ 15.6 ಲಕ್ಷ ನೋಂದಾಯಿತ ಮತದಾರರಿದ್ದು, 8,37,617 ಪುರುಷರು, 7,23,656 ಮಹಿಳೆಯರು ಮತ್ತು 1,267 ಮೂರನೇ ಲಿಂಗ ಮತದಾರರು ಇದ್ದಾರೆ. ಮತದಾರರಲ್ಲಿ 18-19 ವರ್ಷ ವಯಸ್ಸಿನ 2,39,905 ಮೊದಲ ಬಾರಿಗೆ ಮತದಾರರು, 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 109,368 ಹ...