ಭಾರತ, ಫೆಬ್ರವರಿ 3 -- ಕರ್ನಾಟಕದಲ್ಲಿ ಇತ್ತೀಚೆಗೆ ಮೈಕ್ರೋಫೈನಾನ್ಸ್‌ ಬಗ್ಗೆ ಓತಪ್ರೋತವಾಗಿ ಸುದ್ದಿ ಹರಿದು ಬರುತ್ತಲೇ ಇದೆ. ಮೈಕ್ರೋಫೈನಾನ್ಸ್‌ಗಳೆಂದರೆ ಹಳ್ಳಿಗಳಿಗೆ ಅಂಟಿದ ಶಾಪ ಎನ್ನುವ ಮಟ್ಟಿಗೆ ಜನರಲ್ಲಿ ಭಾವನೆ ಮಡುಗಟ್ಟಿದೆ. ಆದರೆ ಅದಷ್ಟೇ ಸತ್ಯವೇ? ಮೈಕ್ರೋಫೈನಾನ್ಸ್‌ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಅಪಸವ್ಯಗಳನ್ನು ಯಾರೂ ಸಮರ್ಥಿಸಲಾರರು. ಇದೀಗ ಮೈಕ್ರೋಫೈನಾನ್ಸ್‌ ಒಕ್ಕೂಟ ಬಿಡುಗಡೆ ಮಾಡಿರುವ ಜಾಹೀರಾತು ಇಂಥ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಿದೆ. ಆಗುತ್ತಿರುವ ಅನಾಹುತಗಳನ್ನು ನಿಲ್ಲಿಸಲು ಆದರೆ ಇಂಥ ಜಾಹೀರಾತುಗಳಿಂದ ಎಷ್ಟರಮಟ್ಟಿಗೆ ಸಾಧ್ಯ ಎನ್ನುವುದು ಮತ್ತೊಂದು ಪ್ರಶ್ನೆ.

ಮೈಕ್ರೋಫೈನಾನ್ಸ್ ಒಕ್ಕೂಟ ನೀಡಿರುವ ಜಾಹೀರಾತಿನ ಪ್ರಕಾರ ಕರ್ನಾಟಕದಲ್ಲಿ ಸುಮಾರು 65 ಲಕ್ಷ ಖಾತಾದಾರರು 37,365 ಕೋಟಿ (ಕಿರು) ಸಾಲ ಪಡೆದಿದ್ದಾರೆ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳು 'ವ್ಯವಹಾರ ಪ್ರತಿನಿಧಿ'ಗಳ ಮೂಲಕ ನೀಡಿರುವ ಕಿರು ಸಾಲ. ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಒದಗಿಸಿರುವ ಕಿರು ಸಾಲವನ್ನೂ ಪರಿಗಣಿಸಿದರೆ...