ಭಾರತ, ಫೆಬ್ರವರಿ 2 -- ಬಹುನಿರೀಕ್ಷಿತ ಕೇಂದ್ರ ಬಜೆಟ್ ಲೋಕಸಭೆಯಲ್ಲಿ ಶನಿವಾರ (ಫೆ 1) ಮಂಡನೆಯಾಗಿದೆ. ಹಲವು ಕಾರಣಗಳಿಂದ ಸಮಾಜದಲ್ಲಿ ಹೊಸ ಆಶಯ ಹುಟ್ಟಿಸಿದ ಹಾಗೂ ಭ್ರಮನಿರಸನಕ್ಕೂ ಕಾರಣವಾದ ಬಜೆಟ್ ಇದು. ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ವೇತನದಾರ ಮಧ್ಯಮ ವರ್ಗದಿಂದ ಭಾರೀ ಮೆಚ್ಚುಗೆ ಪಡೆದುಕೊಂಡರು. ಆದರೆ ದೇಶದ ಸ್ವಾವಲಂಬನೆ, ಆರ್ಥಿಕವಾಗಿ ಹಳ್ಳಿಗಳಿಗೆ ಶಕ್ತಿ ತುಂಬುವ ಕುರಿತು ಮಹತ್ವದ ಯಾವ ಯೋಜನೆ ಮತ್ತು ಯೋಚನೆಯೂ ಅವರ 74 ನಿಮಿಷಗಳ ಭಾಷಣದಲ್ಲಿ ಇರಲಿಲ್ಲ. ಬಜೆಟ್‌ ವಿವರಗಳ ಕಡತಗಳಲ್ಲಿ ಈ ಅಂಶ ಇರಬಹುದೇನೋ? ಕಾದುನೋಡಬೇಕಷ್ಟೇ.

ಬಜೆಟ್ ಭಾಷಣದ ಆರಂಭದಲ್ಲಿಯೇ ಆಂಧ್ರದ ಮಹಾಕವಿ ಗುರಜಾಡ ಅಪ್ಪಾರಾವ್ ಅವರ "ದೇಶಮಂಟೆ ಮಟ್ಟಿ ಕಾದೋಯ್, ದೇಶ ಮಂಟೆ ಮನುಷುಲೋಯ್" (ದೇಶವೆಂದರೆ ಮಣ್ಣಲ್ಲ, ದೇಶವೆಂದರೆ ಮನುಷ್ಯರು) ಎನ್ನುವ ಮಾತು ನೆನಪಿಸಿಕೊಂಡರು. ಇದೇ ಬಜೆಟ್ ಭಾಷಣದ ಕೊನೆಯಲ್ಲಿ ತಮಿಳಿನ ಮಹಾಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಪ್ರಸ್ತಾಪಿಸಿ, 'ಎಲ್ಲ ಜೀವಿಗಳೂ ಮಳೆಗಾಗಿ ...