Bangalore, ಮೇ 2 -- ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ 22 ವಿದ್ಯಾರ್ಥಿ- ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಕಾರವಾರ, ಮಂಡ್ಯ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ 22 ವಿದ್ಯಾಥಿಗಳು ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಈ ಟಾಪರ್‌ಗಳಲ್ಲಿ ಒಬ್ಬರಾದ ಮೈಸೂರಿನ ವಿಜಯನಗರದಲ್ಲಿರುವ ಬಿಕೆಎಸ್‌ ವಿದ್ಯಾ ಭವನ್‌ ಸ್ಕೂಲ್‌ನ ಟಾಪರ್‌ ತಾನ್ಯಾ ಆರ್‌.ಎನ್‌. ಅವರು ತನ್ನ ಯಶಸ್ಸಿನ ಕುರಿತು ಮಾತನಾಡಿದ್ದಾರೆ.

"ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆಯುವ ವಿಶ್ವಾಸ ನನಗಿತ್ತು. ನನ್ನ ಈ ಯಶಸ್ಸಿಗೆ ಟೀಚರ್‌ಗಳ ಬೆಂಬಲದೊಂದಿಗೆ ಅಪ್ಪ ಮತ್ತು ಅಮ್ಮ ಭಾವನಾತ್ಮಕವಾಗಿ ಬೆಂಬಲ ನೀಡಿದ್ದಾರೆ. ಓದು ಓದು ಎಂದು ನನಗೆ ಯಾವತ್ತೂ ಒತ್ತಡ ಹಾಕಲಿಲ್ಲ. ನಾನೇ ಸಾಧಿಸಬೇಕೆಂದು, ಇಷ್ಟಪಟ್ಟು ಓದುತ್ತಿದ್ದೆ" ಎಂದು ತಾನ್ಯಾ ಹೇಳಿದ್ದಾರೆ.

"ಸಾಧಿಸುವ ವಿಶ್ವಾಸವಿದ್ದರೆ ಖಂಡಿತ...