Bengaluru, ಫೆಬ್ರವರಿ 3 -- Balu ​​Belagundi: ಸರಿಗಮಪ ಶೋನಲ್ಲಿ ತಮ್ಮ ಹಾಡಿನ ಮೂಲಕವೇ ನಾಡಿನ ಗಮನ ಸೆಳೆದಿದ್ದಾರೆ ಗಾಯಕ ಬಾಳು ಬೆಳಗುಂದಿ. ಸಂಗೀತದ ಹಿನ್ನೆಲೆಯಿಂದ ಬಾರದಿದ್ದರೂ, ತಮ್ಮ ಸುಮಧುರ ಕಂಠದ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಹವಾ ಸೃಷ್ಟಿಸಿಕೊಂಡಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಬಾಳು ಬಲು ಅಚ್ಚು ಮೆಚ್ಚು. ಜನಪದ ಶೈಲಿಯಲ್ಲಿ ಹಾಡುಗಳನ್ನು ರಚಿಸುತ್ತ, ಅವುಗಳಿಗೆ ತಮ್ಮದೇ ಧಾಟಿಯಲ್ಲಿ ಧ್ವನಿ ನೀಡುತ್ತ ಫೇಮಸ್‌ ಆಗಿದ್ದಾರೆ ಬಾಳು. ಈಗ ಸರಿಗಮಪ ವೇದಿಕೆ ಮೇಲೆ ತಮ್ಮ ಮಿಂಚಿನ ಓಟ ಮುಂದುವರಿಸಿದ್ದಾರೆ. ಚಿತ್ರದುರ್ಗದ ಗಗನಾಳನ್ನು ಹಾಡಿ ಹೊಗಳಿದ್ದಾರೆ.

ಜೀ ಕನ್ನಡದಲ್ಲಿ ಕಳೆದ ವರ್ಷದಿಂದ ಆರಂಭವಾದ ಮೊದಲ ಸೀಸನ್‌ನ ಮಹಾನಟಿ ಶೋ ಸೂಪರ್‌ ಹಿಟ್‌ ಆಗಿತ್ತು. ಆ ಶೋ ಮೂಲಕ ಹೊರಬಂದ ಪ್ರತಿಭೆ ಚಿತ್ರುದುರ್ಗ ಮೂಲದ ಗಗನಾ. ಆ ಶೋ ಬಳಿಕ ಜೀ ಕನ್ನಡದ ಸಾಲು ಸಾಲು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಡಾನ್ಸ್‌ ಕರ್ನಾಟಕ ಡಾನ್ಸ್‌ನಲ್ಲೂ ಮಿಂಚಿದ್ದಾರೆ ಗಗನಾ. ಕಾಮಿಡಿ ಕಿಲಾಡಿ...