ಭಾರತ, ಫೆಬ್ರವರಿ 8 -- ಬೆಂಗಳೂರು: 2020ರ ಸೆಪ್ಟಂಬರ್‌‌ನಲ್ಲಿ ಕನ್ನಡ ಚಿತ್ರರಂಗದ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ಉದ್ಯಮಿ ರಾಹುಲ್ ತೋನ್ಸೆ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ನಂತರ ಈ ಪ್ರಕರಣ ಸಾರ್ವಜನಿಕರ ನೆನಪಿನಿಂದ ಕಣ್ಮರೆಯಾಗುವುದರ ಜತೆಗೆ ಆರೋಪಿಗಳೂ ಶಿಕ್ಷೆಯಿಂದ ಪಾರಾಗಿದ್ದರು. ಇದೇ ಪ್ರಕರಣದ ಕಿಂಗ್‌ಪಿನ್‌ ರಾಹುಲ್ ತೋನ್ಸೆ ಇದೀಗ ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಬರೋಬ್ಬರಿ 25 ಕೋಟಿ ರೂ ವಂಚನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ತೋನ್ಸೆ ಮತ್ತು ಅವರ ಕುಟುಂಬದ ಐವರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದರೆ ಅತಿಯಾದ ಲಾಭ ಬರಲಿದೆ ಎಂಬ ಆಸೆ ತೋರಿಸಿ ಬಸವೇಶ್ವರ ನಗರದ ನಿವಾಸಿ, ಉದ್ಯಮಿ ವಿವೇಕ್ ಹೆಗ್ಡೆ ಮತ್ತು ಅವರ ಸ್ನೇಹಿತರಿಗೆ 25.5 ಕೋಟಿ ರೂ. ವಂಚನೆ ಮಾಡಿದ್ದಾನೆ. ರಾಹುಲ್ ತೋನ್ಸೆ, ಆತನ ತಂದೆ ರಾಮಕೃಷ್ಣ ರಾವ್, ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ....