Bengaluru, ಫೆಬ್ರವರಿ 10 -- City Lights Movie Launched: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ನಟನೆ, ನಿರ್ದೇಶನ, ನಿರ್ಮಾಣ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಕಂಡವರು. ಇದೀಗ ಇದೇ ವಿಜಯ್‌ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ಸಿನಿಮಾರಂಗಕ್ಕೆ ಕರೆತಂದಿದ್ದಾರೆ. ಈಗಾಗಾಲೇ ಮೊದಲ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಸದ್ಯ ಎರಡನೇ ಪುತ್ರಿಯ ಸರದಿ. ಸಿಟಿ ಲೈಟ್ಸ್ ಸಿನಿಮಾ ಮೂಲಕ ವಿಜಿ 2ನೇ ಪುತ್ರಿ ಮೋನಿಷಾ ಸಿನಿಮಾರಂಗಕ್ಕೆ ಆಗಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿನಯ್ ರಾಜ್‌ಕುಮಾರ್ ನಾಯಕ ಎಂಬುದು ವಿಶೇಷ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಸಿಟಿ ಲೈಟ್ಸ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ರಾಘವೇಂದ್ರ ರಾಜ್‌ಕುಮಾರ್ ದಂಪತಿ ಕ್ಲ್ಯಾಪ್ ಮಾಡುವ ಮೂಲಕ ಮಗನ ಚಿತ್ರಕ್ಕೆ ಶುಭಕೋರಿದರು. ರಾಜ್‌ಕುಮಾರ್‌ ಅವರ ಡ್ರೈವರ್‌ ಹನುಮಂತು ಕ್ಯಾಮೆರಾ ಸ್ವಿಚ್‌ ಆನ್‌ ಮಾಡುವ ಮೂಲಕ ತಂಡಕ್ಕೆ ಶುಭಕೋರಿದರು. ಮುಹೂರ್ತಕ್ಕೆ ಯುವ ರಾಜ್‌ಕುಮಾರ್, ನಿನಾಸಂ ಸತೀಶ್‌, ನ...