Bengaluru, ಮಾರ್ಚ್ 7 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 6ರ ಸಂಚಿಕೆಯಲ್ಲಿ ಭಾಗ್ಯಗೆ ಅವಳ ಗೆಳತಿಯರು ದೇವಸ್ಥಾನದ ಕಾರ್ಯಕ್ರಮದಲ್ಲಿ ಅಡುಗೆ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಇದರಿಂದ ಅವಳ ಕೆಲಸ ಸುಗಮವಾಗಿ ಸಾಗಿದೆ, ರುಚಿಕರ ಅಡುಗೆಯೂ ಕ್ಲಪ್ತ ಸಮಯದಲ್ಲಿ ತಯಾರಾಗಿದೆ. ಯಜಮಾನರು ಹೇಳಿದ ಸಮಯದಲ್ಲೇ, ಹೇಳಿದ ಅಷ್ಟೂ ಅಡುಗೆಯನ್ನು ಭಾಗ್ಯ ಮತ್ತು ಅವಳ ಗೆಳತಿಯರ ತಂಡ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಯಜಮಾನರು ಬಂದು ನೋಡಿ, ಅಬ್ಬ, ಅಡುಗೆಯೂ ಆಯಿತೂ, ನಮ್ಮ ಮರ್ಯಾದೆಯೂ ಉಳಿಯಿತು, ನಿಮ್ಮಿಂದ ತುಂಬಾ ಉಪಕಾರವಾಯಿತು, ಹೇಳಿದ ಕೆಲಸ ಸರಿಯಾಗಿ ಮಾಡಿದ್ದೀರಿ, ಸರಿ, ಇನ್ನು ಕೂಡಲೇ ಅಡುಗೆಯನ್ನು ಬಡಿಸಿ ಎಂದು ಭಾಗ್ಯಗೆ ಹೇಳುತ್ತಾರೆ. ಅವರ ಮಾತು ಕೇಳಿ ಭಾಗ್ಯ ದಂಗಾಗುತ್ತಾಳೆ.

ಯಜಮಾನರ ಮಾತು ಕೇಳಿ ಭಾಗ್ಯಗೆ ಒಮ್ಮೆಲೆ ಶಾಕ್ ಆಗುತ್ತದೆ, ಅಡುಗೆ ಮಾಡುವುದಷ್ಟೇ ನಮ್ಮ ಕೆಲಸ ಎಂದುಕೊಂಡಿದ್ದ ಭಾಗ್ಯಗೆ, ಈಗ ಊಟವನ್ನೂ ನಾವೇ ಬಡಿಸಬೇಕು ಎಂಬ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೆ ಅವಳ ಗೆಳತಿಯರು ...