Bengaluru, ಏಪ್ರಿಲ್ 13 -- Shiva Rajkumar: ಮುಂದಿನ ವಾರ (ಏಪ್ರಿಲ್‍ 18) ಬಿಡುಗಡೆಯಾಗಲಿರುವ ರವಿ ಬಸ್ರೂರು ನಿರ್ದೇಶನದ 'ವೀರ ಚಂದ್ರಹಾಸ' ಚಿತ್ರದಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಅದರ ಮುಂದಿನ ವಾರ ಸಹ ಶಿವರಾಜಕುಮಾರ್ ಇನ್ನೊಂದು ಚಿತ್ರದ ಮೂಲಕ ಬರುತ್ತಿದ್ದಾರೆ. ಅದೇ 'ಫೈರ್ ಫ್ಲೈ'.

'ಫೈರ್ ಫ್ಲೈ' ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವೀಸಸ್‍ ಸಂಸ್ಥೆಯಡಿ ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ ಧಾರಾವಾಹಿ ಮತ್ತು ವೆಬ್‍ ಸರಣಿಗಳನ್ನು ನಿರ್ಮಿಸಿದ್ದ ನಿವೇದಿತಾಗೆ ಇದು ಮೊದಲ ಚಿತ್ರ. ಈ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ನನಗೆ ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ, ಈಗಲೂ ಗೊತ್ತಿಲ್ಲ; ಅಜೇಯ್‌ ರಾವ್‌ ʻಯುದ್ಧಕಾಂಡʼ ಚಿತ್ರದ ಸಾಲದ ಬಗ್ಗೆ ರವಿಚಂದ್ರನ್‌ ಮಾತು

ಶಿವರಾಜಕುಮಾರ್ ಈ ಚಿತ್ರದಲ್ಲಿ 'ದಿ ಕಿಂಗ್‍' ಪಿಜ್ಜಾ ಡೆಲಿ...