Hyderabad, ಏಪ್ರಿಲ್ 23 -- ನಟಿ ಖುಷ್ಬೂ ತೂಕ ಇಳಿಸುವ ಜರ್ನಿ ಆಸಕ್ತಿದಾಯಕವಾಗಿದೆ. ಇತ್ತೀಚಿನ ಸಂದರ್ಶನದಲ್ಲಿ ಅವರು ತೂಕ ಇಳಿಸಿಕೊಳ್ಳಲು ಏನು ಮಾಡಿದೆ ಎಂದು ತಿಳಿಸಿದ್ದಾರೆ. ತೂಕ ಇಳಿಸಲು ಬಯಸುವವರು ಇದನ್ನು ಸಲಹೆಯಾಗಿ ಪರಿಗಣಿಸುತ್ತಿದ್ದಾರೆ. ಖ್ಯಾತ ನಟಿ ಖುಷ್ಬೂ ಅವರು ತನ್ನ 54 ವರ್ಷ ವಯಸ್ಸಿನಲ್ಲಿ 20 ಕೆಜಿ ತೂಕ ಇಳಿಕೆ ಮಾಡಿಕೊಂಡಿದ್ದಾರೆ. ಏನೋ ಔಷಧ ತೆಗೆದುಕೊಂಡು ತೂಕ ಇಳಿಸಿಕೊಂಡಿದ್ದಾರೆ ಎಂದು ಎಲ್ಲರೂ ಆ ಸಮಯದಲ್ಲಿ ಟ್ರೋಲ್‌ ಮಾಡಿದ್ದರು.

ನಟಿ ಖುಷ್ಬೂ ನ್ಯೂ ಜನರೇಷನ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ತೂಕ ನಷ್ಟದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. "ನನಗೆ ಸಿಹಿತಿಂಡಿ ಇಷ್ಟ. ಭಾರತದಲ್ಲಿ ತಯಾರಿಸಿದ ಸಿಹಿತಿಂಡಿ ಎಲ್ಲಿ ಕಂಡರೂ ಅದನ್ನು ಬಾಯಿಗೆ ಹಾಕಿಕೊಳ್ಳುತ್ತೇನೆ. ಇದು ನನ್ನ ತೂಕ ಹೆಚ್ಚಲು ಕಾರಣವಾಗಿರಬಹುದು" ಎಂದು ಅವರು ಹೇಳಿದ್ದಾರೆ.

ಸಿಹಿತಿಂಡಿಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಆರೋಗ್ಯ ತೊಂದರೆಗಳು ಉಂಟಾಗುತ್ತವೆ ಎಂದು ಖುಷ್ಬೂ ಹೇಳಿದ್ದಾರೆ. ಇದಾದ ಬಳಿಕ ಇವರು...