ಭಾರತ, ಫೆಬ್ರವರಿ 4 -- ಬಿಳಿ ಅಕ್ಕಿಗಿಂತ ಕಂದು ಅಕ್ಕಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಕಂದು ಅಕ್ಕಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಇದನ್ನು ತಿನ್ನುವುದರಿಂದ ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಕಂದು ಅಕ್ಕಿಯ ಅನ್ನ (ಬ್ರೌನ್ ರೈಸ್) ತಿನ್ನುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದನ್ನು ತಿನ್ನುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಈ ಕಂದು ಅಕ್ಕಿಯಲ್ಲಿ ಫೈಟೊಕೆಮಿಕಲ್ಸ್, ಫ್ಲೇವನಾಯ್ಡ್ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಒಮ್ಮೆಯಾದರೂ ಇದನ್ನು ತಿನ್ನಲು ಪ್ರಯತ್ನಿಸಿ. ಇದನ್ನು ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ: ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಕಪ್‌ನಷ್ಟು ಕಂದು ಅಕ್ಕಿಯ ಅನ್ನ ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ...