ಭಾರತ, ಮಾರ್ಚ್ 4 -- ಪಲಾವ್, ಮೆಂತ್ಯ, ರೈಸ್, ಕ್ಯಾಪ್ಸಿಕಂ ರೈಸ್ ತಿಂದು ಬೇಸರವಾಗಿದ್ದರೆ ಮಟರ್ ರೈಸ್ ಮಾಡಿ ನೋಡಿ. ಮಸಾಲೆಯುಕ್ತ ಈ ಖಾದ್ಯ ಬಹಳ ರುಚಿಕರವಾಗಿರುತ್ತದೆ. ಹಸಿರು ಬಟಾಣಿಯಿಂದ ರುಚಿಕರ ಹಾಗೂ ಆರೋಗ್ಯಕರ ಮಟರ್ ರೈಸ್ ತಯಾರಿಸಿ ತಿನ್ನಬಹುದು. ಅತ್ಯಂತ ಸರಳ ಮತ್ತು ದಿಢೀರನೆ ತಯಾರಿಸಬಹುದಾದ ಮಟರ್ ಅನ್ನವನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ, ಈ ಪಾಕವಿಧಾನ ಪ್ರಯತ್ನಿಸಬಹುದು. ಹಾಗೆಯೇ ಮಕ್ಕಳ ಲಂಚ್ ಬಾಕ್ಸ್‌ಗೂ ಇದನ್ನು ಹಾಕಿ ಕೊಡಬಹುದು. ಮಟರ್ ರೈಸ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಎರಡು ಕಪ್ ಹಸಿರು ಬಟಾಣಿ, ಎರಡು ಕಪ್ ಬಾಸ್ಮತಿ ಅಕ್ಕಿ ಅಥವಾ ಸೋನಮಸೂರಿ ಅಕ್ಕಿ, ಎರಡು ಚಮಚ ತುಪ್ಪ, ಒಂದು ಚಮಚ ಜೀರಿಗೆ ಅಥವಾ ಕಪ್ಪು ಜೀರಿಗೆ, ಒಂದು ಬಿರಿಯಾನಿ ಎಲೆ, ನಾಲ್ಕು ಲವಂಗ, ಎರಡು ಏಲಕ್ಕಿ, ಒಂದು ಸಣ್ಣ ತುಂಡು ದಾಲ್ಚಿನ್ನಿ, ಒಂದು ಅನಾನಸ್ ಹೂವು, ಒಂದು ಜಾವಿತ್ರಿ, ಎರಡು ಚಮಚ ಗೋಡಂಬಿ, ಒಂದು ಚಮಚ ಶುಂಠಿ-ಬೆಳ್ಳುಳ್ಳ...