Chitradurga, ಮೇ 18 -- ಚಿತ್ರದುರ್ಗ: ದಶಕಗಳ ಬೇಡಿಕೆಯಾದ, ಈಗಾಗಲೇ ಪ್ರಗತಿಯಲ್ಲಿರುವ ದಾವಣಗೆರೆ -ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಯೋಜನೆ ಮುಗಿಯಲು ಇನ್ನೂ ಎರಡೂವರೆ ವರ್ಷ ಬೇಕೇ ಬೇಕು. ಬಯಲುಸೀಮೆ ಜನ ದಾವಣಗೆರೆಯಿಂದ ಚಿತ್ರದುರ್ಗ ಮಾರ್ಗವಾಗಿ ತುಮಕೂರಿಗೆ ನೇರವಾಗಿ ರೈಲಿನ ಮೂಲಕ ತಲುಪಲು 2027ರ ಡಿಸೆಂಬರ್ ವರೆಗೂ ಕಾಯಬೇಕು. ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿರುವ ವಿ.ಸೋಮಣ್ಣ ಅವರು ಚಿತ್ರದುರ್ಗದಲ್ಲಿ ಶನಿವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆ ವೇಳೆ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದರು. ನಾನಾ ಕಾರಣಗಳಿಂದ ವಿಳಂಬವಾಗಿರುವ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರೈಸುವಂತ ಸೂಚನೆಯನ್ನು ನೀಡಲಾಗಿದೆ.

ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ದಾವಣಗೆರೆ-ಚಿತ್ರದುರ್ಗ-ತುಮಕೂರು ನೂತನ ರೈಲ್ವೆ ಮಾರ್ಗದ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಪ್ರತಿಷ್ಟಿತ ಯೋಜನೆಯಾದ ರಾಯದುರ್ಗ-ತುಮಕೂರು ಯೋಜನೆಯು ...