ಭಾರತ, ಫೆಬ್ರವರಿ 7 -- ರಾಷ್ಟ್ರೀಯ ಅಕ್ಷರ ಹಬ್ಬ: ದಾವಣಗೆರೆ ಲಿಟರರಿ ಫೋರಂ ಮತ್ತು ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ದಾವಣಗೆರೆಯ ಶ್ಯಾಮನೂರು ರಸ್ತೆಯ ಎಂಬಿಎ ಕಾಲೇಜು ಅಡಿಟೋರಿಯಂನಲ್ಲಿ ಇಂದಿನಿಂದ ಮೂರು ದಿನ 'ರಾಷ್ಟ್ರೀಯ ಅಕ್ಷರ ಹಬ್ಬ' ನಡೆಯಲಿದೆ. ಇಂದು (ಫೆ 7) ಬೆಳಗ್ಗೆ 10.30 ರಿಂದ 12.30ರ ತನಕ ಉದ್ಘಾಟನೆ ನಡೆಯಲಿದ್ದು, ಸಾಹಿತಿ, ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಉದ್ಘಾಟಿಸಲಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ದೂರದರ್ಶನದ ಚಂದನ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥೆ ಆರತಿ ಎಚ್.ಎನ್., ಕತೆಗಾರ್ತಿ ಚಾಂದಿನಿ, ಚಿಂತಕ ಪ್ರೊ.ಎ.ಬಿ. ರಾಮಚಂದ್ರಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ರಾಷ್ಟ್ರೀಯ ಅಕ್ಷರ ಹಬ್ಬದ ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ 9ರ ತನಕ ಮೂರು ದಿನಗಳ ಕಾಲ ರಾಷ್ಟ್ರೀಯ ಅಕ್ಷರ ಹಬ್ಬದಲ್ಲಿ ಕಥಾ ಸಮಯ, ಕವಿ ಸಮಯ,...
Click here to read full article from source
To read the full article or to get the complete feed from this publication, please
Contact Us.