ಭಾರತ, ಮೇ 19 -- ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (LSG vs SRH) ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಹೈಸ್ಕೋರಿಂಗ್ ಪಂದ್ಯದಲ್ಲಿ, ಈಗಾಗಲೇ ಟೂರ್ನಿಯಿಂದ ಎಲಿಮನೇಟ್ ಆಗಿರುವ ಎಸ್‌ಆರ್‌ಎಚ್ ಅಬ್ಬರಿಸಿ ಗೆದ್ದಿದೆ. ಅಪರೂಪವೆಂಬಂತೆ ತಂಡದ ಆಟಗಾರರು ಅಬ್ಬರಿಸಿದ್ದು, ಸಾಂಘಿಕ ಹೋರಾಟಕ್ಕೆ ಗೆಲುವು ಒಲಿದಿದೆ. ಅತ್ತ ತವರು ಮೈದಾನದಲ್ಲಿ ಮುಗ್ಗರಿಸಿದ ಎಲ್‌ಎಸ್‌ಜಿ, ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಐದು ತಂಡಗಳು ಟೂರ್ನಿಯಿಂದ ಹೊರಬಿದ್ದಂತಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ 7 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭರ್ಜರಿ ಚೇಸಿಂಗ್ ನಡೆಸಿದ ಸನ್‌ರೈಸರ್ಸ್, ಕೇವಲ 18.2 ಓವರ್‌ಗಳಲ್ಲಿ ಗುರಿ ತಲುಪಿತು.
ಲಕ್ನೋ ಸ್ಟೇಡಿಯಂನಲ್ಲಿ ಇದು ದಾಖಲೆಯ ಚೇಸಿಂಗ್. ಐಪಿಎಲ್‌ನಲ್ಲಿ ಈ ಮೈದಾನದಲ್ಲಿ ಇದುವರೆಗೂ 200ಕ್ಕ...
Click here to read full article from source
To read the full article or to get the complete feed from this publication, please
Contact Us.