ಭಾರತ, ಏಪ್ರಿಲ್ 22 -- ದಶಾವತಾರದಲ್ಲಿ ಭಗವಾನ್ ವಿಷ್ಣುವಿನ ಆರನೆಯ ಅವತಾರವೇ ಪರಶುರಾಮನ ಅವತಾರ. ಪರಶುರಾಮನು ಬ್ರಹ್ಮನ ವಂಶಕ್ಕೆ ಸೇರಿದವನು. ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡಿ ಸ್ವತಃ ಪರಶಿವನ ಶಿಷ್ಯನಾಗುತ್ತಾನೆ. ತ್ರೇತಾ ಯುಗದ ಅಂತ್ಯದ ಕಾಲದಲ್ಲಿದ್ದ ಸಪ್ತ ಋಷಿಗಳಲ್ಲಿ ಒಬ್ಬರಾದ ಜಮಜಗ್ನಿ ಮಹರ್ಷಿ ಮತ್ತು ರೇಣುಕಾದೇವಿ ದಂಪತಿಗೆ ಜನಿಸಿದ ವೀರನೇ ಈ ಪರಶುರಾಮ. ಏಳು ಜನ ಚಿರಂಜೀವಿಗಳಲ್ಲಿ ಪರಶುರಾಮನು ಒಬ್ಬನಾಗಿರುತ್ತಾನೆ. ಪರಶುರಾಮನ ಜನ್ಮಸ್ಥಳವು ಪರಶುಘಡ ಎಂಬ ಸ್ಥಳವಾಗಿದೆ. ಇದು ಈಗಿನ ಸವದತ್ತಿ ಆಗಿದೆ. ಕೇರಳದ ಪ್ರಾಚೀನ ಯುದ್ದಕಲೆಯಾದ ಕಲರಿಪಯಟ್ಟು ಆರಂಭವಾದದ್ದು ಪರಶುರಾಮನಿಂದ ಎಂದು ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.

ಇವರ ಆಯುಧ ಕೊಡಲಿ. ಪರಶು ಎಂದರೆ ಕೊಡಲಿ ಎಂಬ ಅರ್ಥ ಬರುತ್ತದೆ. ಆದ್ದರಿಂದ ಇವರಿಗೆ ಪರಶುರಾಮ ಎಂಬ ಹೆಸರು ಬಂದಿದೆ. ಜೀವನದಲ್ಲಿ ಎದುರಾಗುವ ಕೆಲವೊಂದು ಪ್ರಸಂಗದಿಂದ ಪರಶುರಾಮನು ಸಕಲ ಕ್ಷತ್ರಿಯರನ್ನು ಕೊಲ್ಲುವ ನಿರ್ಧಾರಕ್ಕೆ ಬರುತ್ತಾರೆ. ಈ ಕಾರಣದಿಂದ 21 ಬಾರಿ ಭೂಮಿಯನ್ನು ಸುತ್ತಿ ಕೆಟ್ಟ ಮನಸ...