ಭಾರತ, ಮಾರ್ಚ್ 18 -- Shani Stotra: ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮದ ಫಲಿತಾಂಶಗಳನ್ನು ನೀಡುವ ದೇವರು ಎಂದು ಪರಿಗಣಿಸಲಾಗುತ್ತದೆ. ಗ್ರಹಗಳ ಪೈಕಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿ. ವೈದಿಕ ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮದ ಫಲಿತಾಂಶಗಳನ್ನು ನೀಡುವ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ಎಲ್ಲರಿಗೂ ಅವರ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ.

ಕರ್ಮಫಲಗಳಲ್ಲಿ ಶುಭ ಹಾಗೂ ಅಶುಭ ಫಲಗಳಿಗೇನೂ ಕೊರತೆ ಇಲ್ಲ. ಶನಿದೆಸೆ, ಸಾಡೇಸಾತಿ ಎಂದರೆ ಆಸ್ತಿಕರು ಸಂಕಷ್ಟಕ್ಕೆ ಬೆದರುತ್ತಾರೆ. ಆಗ ಪರಿಹಾರಕ್ಕೆ ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರವನ್ನು ಹೇಳುವಂತೆ ಸೂಚಿಸಲಾಗುತ್ತದೆ. ಶನಿದೇವರನ್ನು ಮೆಚ್ಚಿಸಲು ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರ ಹೇಳಬೇಕು ಎನ್ನುತ್ತಾರೆ ಹಿರೀಕರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪಿಪ್ಪಲಾದ ಮುನಿಯು ಶನಿದೇವನನ್ನು ಹತ್ತು ಹೆಸರುಗಳಿಂದ ಸ್ತುತಿಸಿದ್ದು, ಆ ಹತ್ತು ಹೆಸರುಗಳ ನ...