ಭಾರತ, ಮಾರ್ಚ್ 26 -- ಅತ್ತ ಸೂರ್ಯ ಮಕರ ರಾಶಿ ಪ್ರವೇಶ ಮಾಡಿದರೆ ಇತ್ತ ದಳಪತಿ ವಿಜಯ್ ಅಭಿನಯದ ಕಟ್ಟ ಕಡೆಯ ಸಿನಿಮಾದ ಭರ್ಜರಿ ಶೋ ತೆರೆಕಾಣುತ್ತಿರುತ್ತದೆ. 2026 ಜನವರಿ 9 ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮ. ಅದೇ ದಿನ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸುಮಾರು 500 ಕೋಟಿ ಅಧಿಕ ಬಜೆಟ್ ನೊಂದಿಗೆ ಸೆಟ್ಟೇರಿರೋ ಸಿನಿಮಾ ಜನ ನಾಯಕನ್ ಈ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಇದು ದಳಪತಿ ವಿಜಯ್ ಅಭಿನಯದ 69ನೇ ಸಿನಿಮಾ ಮತ್ತು ಸಿನಿ ಬದುಕಿನಿಂದ ನಿವೃತ್ತಿ ಪಡೆದು ಫುಲ್ ಟೈಂ ರಾಜಕಾರಣಿಯಾಗೋಕೆ ಹೊರಟಿರೋ ವಿಜಯ್ ಕೊನೆಯ ಸಿನಿಮಾ ಕೂಡ ಹೌದು.

ಕೆವಿಎನ್ ಪ್ರೊಡಕ್ಷನ್ಸ್ ದೇಶದ ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮೈಲಿಗಲ್ಲನ್ನೇ ಸ್ಥಾಪಿಸಿದೆ. ಕನ್ನಡದಲ್ಲಿ ಇದೀಗ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ನಿರ್ಮಿಸುತ್ತಿದೆ. ಸಿನಿಮಾ ಅದ್ದೂರಿಯಾಗಿ ಮೂಡಿ ಬರಬೇಕು ಅನ್ನೋದು ಕೆವಿಎನ್ ಪ್ರೊಡಕ್ಷನ್ಸ್ ಒನ್ ಲೈನ್ ಅಜೆಂಡಾ ಆದರೆ ಮತ್ತೊಂದು ಪ್ರಮುಖ ಅಜೆಂಡಾ ಅಂದ್ರೆ, ಹಣ ಕೊಟ್ಟು ಸಿನಿಮಾ ನೋಡು...