ಭಾರತ, ಏಪ್ರಿಲ್ 17 -- ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಇಲಿಯಾನಾ ಡಿಕ್ರೂಸ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಶಂಕರ್ ನಿರ್ದೇಶನದ ನನ್ಬನ್‌ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಥಿಯೇಟರ್‌ಗೆ ಬಂದು 13 ವ‌ರ್ಷಗಳ ನಂತರ ಈ ಸಿನಿಮಾ ಮತ್ತೊಂದು ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಿದೆ. ಇದಕ್ಕೂ ಮೊದಲು ನನ್ಬನ್‌ ಜಿಯೋಹಾಟ್‌ಸ್ಟಾರ್ (ಡಿಸ್ನಿ+ ಹಾಟ್‌ಸ್ಟಾರ್) ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಿತು. 2012ರಲ್ಲಿ ಬಿಡುಗಡೆಯಾದ ಸಿನಿಮಾ ಇದೀಗ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರ ಆರಂಭಿಸಿದೆ. ಇದರಲ್ಲಿ ಜೀವ, ಶ್ರೀಕಾಂತ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ನನ್ಬನ್ ಚಿತ್ರವು ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಮೂವರು ಸ್ನೇಹಿತರ ಸುತ್ತ ಸುತ್ತುತ್ತದೆ. ಕಾಲೇಜು ಸನ್ನಿವೇಶಗಳಿಂದ ತುಂಬಿರುವ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗದೇ ಇರದು. ಕಾಮಿಡಿಯ ಜೊತೆ ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿದೆ. '3 ಈಡಿಯಟ್ಸ್' ಚಿತ್ರದ ಹಿಂದಿ ಆವೃತ್ತಿಯ ಕಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡದೆ ತಮಿಳಿಗೆ ತರ...