ಭಾರತ, ಮೇ 25 -- ಸಿನಿಮಾ ಬಿಡುಗಡೆಗೆ ಸನಿಹ ಇದೆ ಎನ್ನುತ್ತಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಎಕ್ಸ್‌ಪೋಸ್ ಆದವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು. ಅತ್ಯಾಚಾರ ಆರೋಪವೂ ಇದೇ ನಟನ ವಿರುದ್ಧ ಕೇಳಿಬಂತು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಜೈಲೂ ಸೇರಬೇಕಾಯಿತು ಮನು. ಇಷ್ಟೆಲ್ಲ ಏರಿಳಿತಗಳ ನಡುವೆಯೇ ಇದೀಗ ಅಚ್ಚರಿಯ ರೀತಿಯ ಮಡೆನೂರು ಮನು ಅವರದ್ದೇ ಎನ್ನಲಾಗಿರುವ ಆಡಿಯೋವೊಂದು ಹೊಸ ಸಂಚಲನಕ್ಕೆ ಕಾರಣವಾಗಿದೆ.
ಮದ್ಯ ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಮನು ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ದೂರಿನ ಅಡಿಯಲ್ಲಿ ಮನು ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದ ತನಿಖೆಯಲ್ಲಿರುವಾಗಲೇ, ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‌ವೊಂದನ್ನು ಸಂತ್ರಸ್ತ ಮಹಿಳೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಆಡಿಯೋದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಬಗ್ಗೆ ಮನು ಬಾಯಿ ಬಿಚ್ಚಿದ್ದಾರೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.