Dakshina kannada, ಮಾರ್ಚ್ 20 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಆನೆಗಳು ಕೃಷಿಕರ ತೋಟಗಳಿಗೆ ಲಗ್ಗೆ ಇಡುವುದು, ರಸ್ತೆಯಲ್ಲಿ ಕಾಣಸಿಗುವುದು ಮಾಮೂಲು. ಆನೆ ಹೋದದ್ದೇ ದಾರಿ ಎಂಬ ಮಾತಿನಂತೆ ಆನೆಯ ಸಂಚಾರವನ್ನು ತಡೆಯಲು ಕಷ್ಟಸಾಧ್ಯವಾದರೂ ಹಲವು ಪ್ರಯತ್ನಗಳು ನಿರಂತರವಾಗಿ ಅರಣ್ಯ ಇಲಾಖೆ ಹಾಗೂ ಊರವರಿಂದ ನಡೆಯುತ್ತಲೇ ಇದೆ. ಇದರ ಮುಂದುವರಿದ ಭಾಗವಾಗಿ ರಾಜ್ಯ ಸರಕಾರ ಆನೆಕಂದಕ ನಿರ್ಮಾಣಕ್ಕೆ ಮುಂದಾಗಿದೆ. ಕೃಷಿ ಭೂಮಿಗೆ ನುಗ್ಗುವ ಆನೆಯನ್ನು ನಿಯಂತ್ರಿಸಿ ಮರಳಿ ಕಾಡಿಗೆ ಕಳುಹಿಸುವ ಯತ್ನದ ಯೋಜನೆಯ ಭಾಗವಾಗಿ ಆನೆ ಕಂದಕ ನಿರ್ಮಾಣವಾಗುತ್ತಿದೆ.

ಕಳೆದ ಎರಡು-ಮೂರು ವರ್ಷಗಳಿಂದ ಕಾಡಾನೆಯ ನಿರಂತರ ಉಪಟಳದಿಂದ ಬೇಸತ್ತು ಹೋಗಿದ್ದ ಧರ್ಮಸ್ಥಳ ಗ್ರಾಮದ ನೇರ್ತನೆ ಪ್ರದೇಶಕ್ಕೆ ಇದೀಗ ರಾಜ್ಯ ಸರಕಾರ ಆನೆ ಕಂದಕ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದೆ. ಹೀಗಾಗಿ ಆನೆ ಕಂದಕದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ನೇರ್ತನೆ ಪರಿಸರದಲ್ಲಿ ಕಾಡ...