ಭಾರತ, ಮಾರ್ಚ್ 13 -- Mangaluru Weather: ಬೆಳ್ತಂಗಡಿಯಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದರೆ, ಜಿಲ್ಲೆಯ ಉಳಿದೆಡೆಯೂ ಉತ್ತಮ ಮಳೆ ಸುರಿದಿದೆ. ಬೆಳ್ತಂಗಡಿ, ಉಜಿರೆ, ಮುಂಡಾಜೆ, ನಡ, ಶಿಶಿಲ, ಶಿವಾಜಿ, ಅರಸಿನಮಕ್ಕಿ, ನೆರಿಯ, ಗುರುವಾಯನಕೆರೆ, ಕೊಯ್ಯರು ಇಂದಬೆಟ್ಟು ಸಹಿತ ಕೆಲವು ಭಾಗದಲ್ಲಿ ಗಡುಗು ಸಹಿತ ಗಾಳಿ ಮಳೆ ಸುರಿದಿದೆ.

ಕೊಕ್ಕಡ, ಬಂದಾರು ಸಹಿತ ವಿವಿಧೆಡೆ ತುಂತುರು ಮಳೆಯಾಗಿದೆ. ತಾಲೂಕಿನ ಕೆಲವೆಡೆ ಗುಡುಗು ಗಾಳಿ ಬೀಸಿದ ಬಗ್ಗೆ ವರದಿಯಾಗಿದೆ. ವಿದ್ಯುತ್ ಕಂಬಗಳಿಗೆ ಹಾನಿ ಗುಡುಗು ಸಹಿತ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಬೆಳ್ತಂಗಡಿ ಮೆಸ್ಕಾಂ ಉಪವಿಭಾಗಕ್ಕೆ ಸೇರಿದ ಕೊಯ್ಯರು ಮಲೆಬೆಟ್ಟು ಸಹಿತ ಹಲವೆಡೆ ಕಂಬಗಳು ಉರುಳಿವೆ.

ಕಕ್ಕಿಂಜೆ, ಮುಂಡಾಜೆ, ನಡೆ, ಇಂದಬೆಟ್ಟು ಧರ್ಮಸ್ಥಳ, ಉದರೆ ಭಾಗದಲ್ಲಿ ಅಲಿಕಲ್ಲು ಮಳೆಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಸಂಜೆ ಹೊತ್ತಿಗೆ ಗಾಳಿ ಸಹಿತ ಸಿಡಿಬಿನೊಂದಿಗೆ ಮಳೆ ಸುರಿದಿದೆ. ಬೆಳ್ತಂಗಡಿ ಪೇಟೆಯಲ್ಲಿ 20 ನಿಮಿಷಗಳ ಕಾಲ ಮಳೆ...