Bangalore, ಏಪ್ರಿಲ್ 17 -- ಬೆಂಗಳೂರು: ಬೇಸಿಗೆಯ ಬಿರು ಬಿಸಿಲಿನ ನಡುವೆ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ ಸಹಿತ ಹಲವು ಭಾಗಗಳಲ್ಲಿ ಮಳೆಯಾಗಿದೆ. ಬುಧವಾರ ಸಂಜೆಯಂತೂ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಗುರುವಾರವೂ ಐದಾರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಬೆಂಗಳೂರು ನಗರದಲ್ಲಂತೂ ಬುಧವಾರ ಸುರಿದ ಮಳೆಗೆ ಕೆಲ ಭಾಗದಲ್ಲಿ ಅಡಚಣೆಗಳೂ ಆದರೂ ಬಿಸಿಲಿನಿಂದ ಬಳಲಿದ ಜನರಿಗೆ ಮಳೆ ನಿರಾಳತೆಯನ್ನು ತಂದಿತು. ಗುಡುಗು ಸಿಡಿಲು ಸಹಿತ ಮಳೆಯೂ ಕೆಲವು ಜಿಲ್ಲೆಗಳಲ್ಲಿ ಆಗಬಹುದು. ಇಲ್ಲದೇ ಮುಂದಿನ ಐದು ದಿನಗಳವರೆಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ತನ್ನ ದೈನಂದಿನ ವರದಿಯಲ್ಲಿ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಬಿಸಿಲಿನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ.

Published by HT Digital Content Services with permission from HT Kannada....