Bangalore, ಮಾರ್ಚ್ 14 -- Karnataka Weather: ಕರ್ನಾಟಕದ ಕರಾವಳಿ ಭಾಗ,ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಜತೆಗೆ ಬೆಂಗಳೂರಿನಲ್ಲೂ ಬೇಸಿಗೆ ಮೊದಲ ಮಳೆಯಾಗಿದ್ದು. ಕೆಲವೆಡೆ ಮೂರು ದಿನ ಮಳೆಯಾಗಿದೆ. ಮತ್ತೆ ಎರಡು ದಿನಗಳ ನಂತರ ಅಂದರೆ ಮಾರ್ಚ್‌ 16ರಂದು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು. ಮೈಸೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾನುವಾರ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯಿದೆ. ಇದರ ನಡುವೆ ಗುರುವಾರವೂ ಕೆಲವು ಭಾಗಗಳಲ್ಲಿ ಹಗುರವಾದ ಮಳೆಯಾಗಿದ್ದು, ಬಿಸಿಲಿನಿಂದ ಬಳಲುತ್ತಿದ್ದವರಿಗೆ ನಿರಾಳತೆ ತಂದಿದೆ. ಆದರೆ ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಗದಗ, ಬಾಗಲಕೋಟೆ ಸಹಿತ ಹಲವು ಭಾಗಗಳ ಗರಿಷ್ಠ ಉಷ್ಣಾಂಶ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಹೋಳಿ ಹಬ್ಬದ ಮೂರ್ನಾಲ್ಕು ದಿನ ಬಿಸಿಲ ಝಳ ಜೋರಾಗಿಯೇ ಇರಲಿದೆ.

ಬುಧವಾರ ಹಾಗೂ ಗುರುವಾರದಂದು ಕೆಲವು ಭಾಗಗಳಲ್ಲಿ ಮಳೆ ಚೆನ್ನಾಗಿಯೇ ಆಗಿದೆ. ಧರ್ಮಸ್ಥಳದಲ್ಲಿ ಐದು ಸೆ...