Dakshina kannada, ಮೇ 11 -- ಮಂಗಳೂರು: ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯ ಜೊತೆ ಅಸಭ್ಯ ವರ್ತನೆ ತೋರಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷನೊಬ್ಬನ ವಿರುದ್ಧ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇಡ್ಕಿದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಕೊಡೆಂಚರಪಾಲು ಪ್ರಕರಣದ ಆರೋಪಿ. ಮನೆಗೆ ಹೋಗುವ ರಸ್ತೆಗೆ ಸಂಬಂಧಿಸಿದ ಂತೆ ಮಹಿಳೆಗೂ ಪದ್ಮನಾಭ ಅವರಿಗೂ ವಿವಾದ ಇತ್ತು. ರಸ್ರೆಯ ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆ ಮುಂದೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ (ಈ ಬಗ್ಗೆ ವೀಡಿಯೋ ವೈರಲ್ ಆಗಿದೆ.) ಎನ್ನಲಾಗಿದೆ. ಮಹಿಳೆ ಪದ್ಮನಾಭ ಸಪಲ್ಯ ಅವರ ವಿರುದ್ಧ ವಿಟ್ಲ ಪೊಲೀಸರಿಗೆ ದೂರು ನೀಡಿದರು.

ಘಟನೆಯ ಮಾಹಿತಿ ಪಡೆದ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ತಕ್ಷಣದಿಂದ ಜಾರಿಗೆ ಬರುವಂತೆ ಪದ್ಮನಾಭ ಸಪಲ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ...