Bengaluru, ಫೆಬ್ರವರಿ 25 -- ಅಮೃತಧಾರೆ ಧಾರಾವಾಹಿಯ ಕಳೆದ ಕೆಲವು ಸಂಚಿಕೆಗಳಲ್ಲಿ ಭೂಮಿಕಾ ಮತ್ತು ಗೌತಮ್‌ಗೆ ಮಗು ಆಗೋದಿಲ್ಲ ಎಂಬ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ನಿಜ ಏನೆಂದರೆ, ಭೂಮಿಕಾಗೆ ಪ್ರೆಗ್ನೆನ್ಸಿ ಸೂಚನೆ ದೊರಕಿದೆ. ಆದರೆ, ಶಕುಂತಲಾದೇವಿ ಡಾಕ್ಟರ್‌ನಲ್ಲಿ ಸುಳ್ಳು ಹೇಳಿಸಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿದ್ದ ಭೂಮಿಕಾಗೆ ಮಗು ಆಗೋದಿಲ್ಲ ಎಂದು ಸುಳ್ಳು ಹೇಳಿಸಿದ್ದಾರೆ. ಭೂಮಿಕಾಳ ರಿಪೋರ್ಟ್‌ ಅನ್ನು ಡಾಕ್ಟರ್‌ಗೆ ತೋರಿಸಿದಾಗ ಡಾಕ್ಟರ್‌ ಕೂಡ ಇನ್ನೊಂದು ಸುಳ್ಳು ಹೇಳಿದ್ದಾರೆ. "ಭೂಮಿಕಾಗೆ ಗರ್ಭಕೋಶದ ಸಮಸ್ಯೆ ಇದೆ. ಇನ್ನು ಎಂದಿಗೂ ಮಗು ಆಗೋದಿಲ್ಲ" ಎಂದಿದ್ದಾರೆ.

ಭೂಮಿಕಾಳಿಗೆ ಮಗು ಆಗೋ ಸಾಧ್ಯತೆ ಇಲ್ಲ ಎಂಬ ವಿಷಯ ಗೌತಮ್‌ಗೆ ಆಘಾತ ತಂದಿದೆ. ಇಲ್ಲಿ ಗೌತಮ್‌ ಜಂಟಲ್‌ಮ್ಯಾನ್‌ ರೀತಿ ವರ್ತಿಸಿದ್ದಾರೆ. ಮನೆಯಲ್ಲಿ ಸುಳ್ಳು ಹೇಳಿದ್ದಾರೆ. ಭೂಮಿಕಾಗೆ ಮಗು ಆಗದೆ ಇರಲು ನಾನೇ ಕಾರಣ, ನನಗೆ ಪ್ರಾಬ್ಲಂ ಇದೆ ಎಂದಿದ್ದಾರೆ. ಈ ಮೂಲಕ ಶಕುಂತಲಾ ಪ್ಲ್ಯಾನ್‌ ಎಲ್ಲವೂ ಉಲ್ಟಾ ಆಗಿದೆ. ಆದರೆ, ಭೂಮಿಕಾನನ್ನು ಈ ಮನೆಯಿಂದ ...