ಭಾರತ, ಫೆಬ್ರವರಿ 19 -- ಪಿವಿ ಸಿಂಧು ನೇತೃತ್ವದ ಭಾರತ ವನಿತೆಯರ ಬ್ಯಾಡ್ಮಿಂಟನ್‌ ತಂಡವು, ಏಷ್ಯಾ ಟೀಮ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ (Badminton Asia Team Championships) ಗೆದ್ದಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ಸುದೀರ್ಘ ನಾಲ್ಕು ತಿಂಗಳ ಗಾಯದ ಬಳಿಕ ಚೇತರಿಸಿಕೊಂಡು ತಂಡಕ್ಕೆ ಮರಳಿದರು. ಅನಭವಿಗಳ ಕೊರತೆಯಿದ್ದರೂ, ಬಲಿಷ್ಠ ತಂಡ ಕಟ್ಟಿ ಟೂರ್ನಿಯಲ್ಲಿ ಭಾರತ ಯಶಸ್ವಿಯಾಗಿದೆ.

2016ರಲ್ಲಿ ಆರಂಭವಾದ ಬಳಿಕ, ಇದೇ ಮೊದಲ ಬಾರಿಗೆ ಭಾರತ ಟೂರ್ನಿಯಲ್ಲಿ ಗೆದ್ದಿದೆ. ಫೈನಲ್‌ ಸುತ್ತಿನಲ್ಲಿ ಥಾಯ್ಲೆಂಡ್ ತಂಡವನ್ನು 3-2 ಅಂಕಗಳಿಂದ ಮಣಿಸಿ ದ್ವೈವಾರ್ಷಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅಗ್ರ ಮೂರು ಬಲಿಷ್ಠ ತಂಡಗಳಾದ ಚೀನಾ, ಜಪಾನ್ ಮತ್ತು ಥಾಯ್ಲೆಂಡ್ ಅನ್ನು ಸೋಲಿಸಿದ ಭಾರತವು, ಫೈನಲ್‌ ಪಂದ್ಯದಲ್ಲೂ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿತು.

ಅಶ್ವಿನಿ ಪೊನ್ನಪ್ಪ ಅವರನ್ನು ಹೊರತುಪಡಿಸಿ, ತಂಡದಲ್ಲಿ ಹೆಚ್ಚು ಅನುಭವ ಇರುವ ಆಟಗಾರ್ತಿಯರೇ ಇರಲಿಲ್ಲ. ಯುವತಿಯರ ಬಳಗದಲ್ಲಿ 15 ವರ್ಷದ ತನ್ವಿ ಶರ್ಮಾ ಕೂಡಾ ...