Chennai,Bengaluru, ಮಾರ್ಚ್ 14 -- ಚಾಲ್ತಿಯಲ್ಲಿರುವ ಕೇಂದ್ರ ಸರ್ಕಾರ ಹಾಗೂ ತಮಿಳು ನಾಡು ಸರ್ಕಾರಗಳ ನಡುವಿನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ತ್ರಿಭಾಷಾ ಸೂತ್ರದ ಸಮರದ ನಡುವೆಯೇ ತಮಿಳುನಾಡಿನ ಎಂಕೆ ಸ್ಟಾಲಿನ್ ಸರ್ಕಾರವು ತನ್ನ ಈ ಸಲದ ಬಜೆಟ್‌ ಪುಸ್ತಕದಲ್ಲಿ ರೂಪಾಯಿ ಚಿಹ್ನೆ ಬದಲು ತಮಿಳು ಭಾಷೆಯ 'ರು' ಅಕ್ಷರಕ್ಕೆ ಬದಲಿಸಿದೆ. ಈ ವಿಚಾರ ಸಂಸತ್ತಿನಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ತಮಿಳುನಾಡು ಸರ್ಕಾರದ ನಡೆ ದೇಶದ ಹಿತಕ್ಕೆ ಮಾರಕವಾದುದು ಎಂಬ ಟೀಕೆ, ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಬದಲು ಈಗಾಗಲೇ ಚಾಲ್ತಿಯಲ್ಲಿರುವ ದ್ವಿಭಾಷಾ ಸೂತ್ರವನ್ನೇ ಅನುಸರಿಸುವ ಪಟ್ಟು ಹಿಡಿದು ತಮಿಳುನಾಡು ಸರ್ಕಾರ ಮುಂದುವರಿದಿದೆ.

ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಇಂದು (ಮಾರ್ಚ್ 14) ತನ್ನ 'ತಮಿಳುನಾಡು ಬಜೆಟ್ 2025-26' ಅನ್ನು ಮಂಡಿಸಲಿದೆ. ಇದುವರೆಗೂ ಬಳಕೆಯಾಗುತ್ತಿದ್ದ ದೇವನಾಗರಿ ಲಿಪಿಯ ರೂಪಾಯಿ ಚಿಹ್ನೆಯನ್ನು ಈ ಸಲದ ಬಜೆಟ್ ಪುಸ್ತಕದಲ್ಲಿ ತಮಿಳು ಭಾಷೆಯ 'ರು' ಅಕ್ಷರಕ್ಕೆ ಬದಲಿಸಿದೆ. ...