Bengaluru, ಮೇ 13 -- ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತ್ಯಾಜ್ಯ ನಿರ್ವಹಣೆಗೆ ಬೆಂಗಳೂರಿನಲ್ಲಿ ಭೂಮಿ ಇಲ್ಲ. ಬೆಂಗಳೂರು ಹೊರವಲಯದಲ್ಲಿ ನಿರ್ವಹಣೆ ಮಾಡೋಣ ಎಂದರೆ ನಿಮ್ಮ ಕಸವನ್ನು ತಂದು ನಮ್ಮ ಊರಿನಲ್ಲಿ ಏಕೆ ಸುರಿಯುತ್ತೀರಿ ಎಂದು ಸ್ಥಳೀಯರು ವಿರೋಧಿಸುತ್ತಾರೆ. ಅವರ ವಿರೋಧವೂ ಸಕಾರಣವಾಗಿದೆ. ಕಸದಿಂದ ರೋಗರುಜಿನಗಳು ಹೆಚ್ಚಾಗುವ ಭೀತಿ ಇದ್ದೇ ಇರುತ್ತದೆ.

ಈ ಸಮಸ್ಯೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿದೆ. ಖಾಸಗಿ ಕಂಪನಿಯಿಂದ ಭೂಮಿ ಖರೀದಿಸಿ ತ್ಯಾಜ್ಯ ನಿರ್ವಹಣೆ ಮಾಡಲು ನಿರ್ಧರಿಸಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ಷರತ್ತುಬದ್ಧ ಅನುಮೋದನೆ ನೀಡಿದೆ. ಇದೇ ಮೊದಲ ಬಾರಿಗೆ ಬಿಬಿಎಂಪಿ ಖಾಸಗಿ ಒಡೆತನದ ಭೂಮಿ ಖರೀದಿಗೆ ಮುಂದಾಗಿದೆ.

ಈ ಭೂಮಿಯನ್ನು ಟೆರ್ರಾ ಫರ್ಮಾ ಬಯೋಟೆಕ್ನಾಲಜೀಸ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯಿಂದ ಖರೀದಿಸಲು ಬಿಬಿಎಂಪಿ ಮುಂದಾಗಿದೆ. ಈ ಕಂಪನಿ ದೊಡ್ಡಬಳ್ಳಾಪುರ ತಾಲ...