ಭಾರತ, ಫೆಬ್ರವರಿ 14 -- ಬೇಳೆಯಿಂದ ಚಟ್ನಿ ಮಾಡಬಹುದು ಅಂದ್ರೆ ನಂಬ್ತೀರಾ. ಬೇಳೆ ಚಟ್ನಿಯ ರುಚಿ ಹಳೆಯ ಪೀಳಿಗೆಗೆ ಪರಿಚಿತ. ಹೊಸ ಪೀಳಿಗೆಯಲ್ಲಿ ಚಟ್ನಿ ತಿನ್ನುವವರ ಸಂಖ್ಯೆಯೂ ಕಡಿಮೆ, ಅದರಲ್ಲೂ ಬೇಳೆ ಚಟ್ನಿ ಬಗ್ಗೆ ಇತ್ತೀಚಿನವರೂ ಕೇಳಿಯೂ ಇರುವುದಿಲ್ಲ. ಆದರೆ ತೊಗರಿಬೇಳೆಯಿಂದ ತುಂಬಾನೇ ರುಚಿಯಾಗಿರುವ ಚಟ್ನಿ ಮಾಡಬಹುದು.

ತೊಗರಿಬೇಳೆಯನ್ನು ಸಾಂಬಾರ್ ಮತ್ತು ದಾಲ್, ರಸಂಗೆ ಬಳಸುವುದನ್ನು ನೀವು ನೋಡಿರಬಹುದು. ಆದರೆ ಇದರಿಂದ ತಯಾರಿಸುವ ಚಟ್ನಿಯು ಸೂಪರ್ ಆಗಿರುತ್ತೆ. ಹಸಿಮೆಣಸು ಅಥವಾ ಒಣ ಮೆಣಸು ಸೇರಿಸಿ ಈ ಚಟ್ನಿ ತಯಾರಿಸಬಹುದು. ಅನ್ನದ ಜೊತೆ ತಿನ್ನಲು ಸೂಪರ್ ಆಗಿರುತ್ತೆ ಈ ರೆಸಿಪಿ. ಬಿಸಿ ಅನ್ನ, ತುಪ್ಪ ಹಾಗೂ ತೊಗರಿಬೇಳೆ ಚಟ್ನಿ ಇದ್ರೆ ಆ ಊಟದ ಘಮ್ಮತ್ತೇ ಬೇರೆ. ಹಾಗಾದರೆ ತೊಗರಿಬೇಳೆ ಚಟ್ನಿ ತಯಾರಿಸುವುದು ಹೇಗೆ ನೋಡಿ.

ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ - ಅರ್ಧ ಕಪ್‌, ಉಪ್ಪು - ರುಚಿಗೆ ತಕ್ಕಷ್ಟು, ಜೀರಿಗೆ - ಎರಡು ಚಮಚ, ಮೆಣಸಿನಕಾಯಿ - ಹತ್ತು, ಬೆಳ್ಳುಳ್ಳಿ ಎಸಳು - ಹತ್ತು, ಕರಿಬೇವು - ಒಂದು ಹಿಡಿ, ಹುಣಸೆಹಣ್ಣ...