ಭಾರತ, ಮಾರ್ಚ್ 22 -- ವೆಂಕಿ ಕುಡುಮುಲ ನಿರ್ದೇಶಿಸಿರುವ ರಾಬಿನ್ ಹುಡ್ ಸಿನಿಮಾದಲ್ಲಿ ನಿತಿನ್‌ಗೆ ಜೋಡಿಯಾಗಿ ಕನ್ನಡತಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ರಾಜೇಂದ್ರ ಪ್ರಸಾದ್, ವೆನ್ನೆಲಾ ಕಿಶೋರ್ ಮತ್ತು ಬ್ರಹ್ಮಾಜಿ ಸೇರಿದಂತೆ ಘಟಾನುಘಟಿ ಪೋಷಕ ಪಾತ್ರಧಾರಿಗಳು ಚಿತ್ರದಲ್ಲಿದ್ದಾರೆ.
ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಾಯಿ ಶ್ರೀರಾಮ್ ಛಾಯಾಗ್ರಹಣ ಮತ್ತು ಪ್ರವೀಣ್ ಪುಡಿ ಅವರ ಸಂಕಲನ ಚಿತ್ರಕ್ಕಿದೆ.
ಇದೇ ಮಾರ್ಚ್ 28ರಂದು ರಾಬಿನ್ ಹುಡ್ ಸಿನಿಮಾ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಕೆ ಫಿಲಂಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆ ವತಿಯಿಂದ ಕರ್ನಾಟಕದಲ್ಲಿ 120ಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ಪುಷ್ಪ ಸಿನಿಮಾ ಖ್ಯಾತಿಯ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ಇನ್ನು ಶ್ರೀಲೀಲಾ ಸಿನಿಮಾ ಲೈನ್‌ಅಪ್ ನೋಡುವುದಾದರೆ, ರಾಬಿನ್ ಹುಡ್ ಬಳಿಕ, ಮಾಸ್ ಜಾತರ, ಪರಾಸಕ್ತಿ, ಉಸ್ತಾಬ್ ಭಗತ್ ಸಿಂಗ್ ಸಿನಿಮಾಗಳಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.