ಭಾರತ, ಏಪ್ರಿಲ್ 25 -- ತೆಲುಗಿನಲ್ಲಿ ತೆರೆಕಂಡ ದಗ್ಗುಬಾಟಿ ವೆಂಕಟೇಶ್ ನಟಿಸಿದ ಸೂಪರ್ ಹಿಟ್ ಸಿನಿಮಾ ಸಂಕ್ರಾಂತಿಕಿ ವಸ್ತುನ್ನಾಂ ಸಿನಿಮಾ, ಕನ್ನಡದಲ್ಲಿ ಪ್ರೇಮ ಸಂಕ್ರಾಂತಿ ಹೆಸರಿನಲ್ಲಿ ಏಪ್ರಿಲ್ 27ರಂದು ಸಂಜೆ 4:30ಕ್ಕೆ ಮೊದಲ ಬಾರಿಗೆ ಕನ್ನಡಿಗರನ್ನು ಮನರಂಜಿಸಲು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.

ಹಾಗಾದರೆ ಏನಿದು ಕಥೆ? ಅಮೆರಿಕಾದ ಶ್ರೀಮಂತ ಉದ್ಯಮಿ ದೊಡ್ಡ ಕಂಪನಿಯ ಸಿಇಓ ಸತ್ಯ ಹೈದರಾಬಾದ್‌ಗೆ ಬರ್ತಾನೆ. ಆತನನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಬೇಕಾಗಿರುವುದು ಮುಖ್ಯಮಂತ್ರಿಯ ಜವಾಬ್ದಾರಿ ಆಗಿರುತ್ತದೆ.

ಅಷ್ಟರಲ್ಲಿ ಆತನನ್ನು ಬಿಜು ಪಾಂಡೆ ಅಪಹರಿಸುತ್ತಾನೆ. ಆತ ತನ್ನ ಸದಸ್ಯ ಪಾಂಡೆಯನ್ನು ಆತನಿಗೆ ಒಪ್ಪಿಸಿದರೆ ಮಾತ್ರ ಸತ್ಯನನ್ನು ಬಿಟ್ಟುಕೊಡುವುದಾಗಿ ಬ್ಲಾಕ್‌ಮೇಲ್‌ ಮಾಡ್ತಾನೆ. ಇತ್ತ ಐಪಿಎಸ್‌ ಆಫೀಸರ್ ಮೀನಾಕ್ಷಿ, ಸತ್ಯನನ್ನು ಬಿಡಿಸುವ ಜವಾಬ್ದಾರಿಯನ್ನು ಒಪ್ಪಿಕೊಂಡಿರುತ್ತಾಳೆ.

ಇದಕ್ಕೆ ತನ್ನ ಮಾಜಿ ಪ್ರಿಯಕರ ಸಸ್ಪೆನ್ಡ್ ಆಗಿರೋ ಡಿಸಿಪಿ ರಾಜುವಿನ ನೆರವು ಕೇಳ್ತಾಳೆ. ಆದ್ರೆ ರಾಜು ಹಳೆಯದೆಲ್ಲವನ್ನು ಮರೆ...