ಭಾರತ, ಏಪ್ರಿಲ್ 12 -- ತೆಲಂಗಾಣ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಪ್ರಕೃತಿ ಪ್ರೇಮಿಯಾಗಿದ್ದ ವನಜೀವಿ ರಾಮಯ್ಯ ಅವರು ಇಂದು (ಏ.12) ಬೆಳಿಗ್ಗೆ ನಿಧನರಾಗಿದ್ದಾರೆ. 87 ವರ್ಷದ ದಾರಿಪಲ್ಲಿ ರಾಮಯ್ಯ ಅಲಿಯಾಸ್ ವನಜೀವಿ ರಾಮಯ್ಯ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದ್ದು, ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಖಮ್ಮಂನ ಪ್ರಧಾನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಮಯ್ಯ ಅವರು ಸಾಕಷ್ಟು ಪರಿಸರ ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ.

ಮರಗಳ ವ್ಯಾಪ್ತಿಯನ್ನು ವಿಸ್ತರಿಸಲು ನೀಡಿದ ಕೊಡುಗೆಗಾಗಿ ರಾಮಯ್ಯ ಅವರಿಗೆ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಒಂದು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ಹಸಿರಿನ ಮಹತ್ವವನ್ನು ಜಗತ್ತಿಗೆ ಸಾರಿದ ರಾಮಯ್ಯನವರು "ವೃಕ್ಷೋ ರಕ್ಷತಿ ರಕ್ಷಿತಃ" ಎಂಬ ಘೋಷಣೆಯ ಫಲಕವನ್ನು ಯಾವಾಗಲೂ ತೊಟ್ಟುಕೊಂಡಿರುತ್ತಿದ್ದರು. ಪರಿ...