ಭಾರತ, ಫೆಬ್ರವರಿ 25 -- ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದ ಒಂದು ಭಾಗ, ಕಳೆದ ಶನಿವಾರ (ಫೆ.22) ಬೆಳಗ್ಗೆ ಕುಸಿದಿತ್ತು. ಘಟನೆಯಲ್ಲಿ 8 ಕಾರ್ಮಿಕರು ಒಳಗಡೆ ಸಿಲುಕಿ ಇಂದಿಗೆ 72 ಗಂಟೆಗಳು ಕಳೆದಿವೆ. ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದ್ದು, ಒಬ್ಬರ ಪತ್ತೆಯೂ ಸಾಧ್ಯವಾಗಿಲ್ಲ. ಎಸ್‌ಡಿಆರ್‌ಎಫ್ ಮತ್ತು ಭಾರತೀಯ ಸೇನೆ ಸೇರಿದಂತೆ ಹಲವಾರು ರಕ್ಷಣಾ ತಂಡಗಳ ಕಠಿಣ ಪ್ರಯತ್ನದ ಹೊರತಾಗಿಯೂ, ಇಲ್ಲಿಯವರೆಗೂ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪ್ರಗತಿ ಕಂಡುಬಂದಿಲ್ಲ. ಸಿಲುಕಿದವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಇದನ್ನೂ ಓದಿ | ತೆಲಂಗಾಣದಲ್ಲಿ ನಿರ್ಮಾಣ ಹಂತದ ಸುರಂಗದ ಚಾವಣಿ ಕುಸಿತ; ಕನಿಷ್ಠ 6 ಕಾರ್ಮಿಕರು ಸಿಲುಕಿರುವ ಶಂಕೆ, ರಕ್ಷಣಾ ಕಾರ್ಯ ಚುರುಕು

Published by HT Digital Content Services with permission from HT Kannada....