Mangaluru, ಏಪ್ರಿಲ್ 13 -- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶಕ್ಕೆ ದಿನಗಣನೆ ಶುರುವಾಗಿದೆ. ದೇವರಗುಡ್ಡೆಯಲ್ಲಿ ದೇವಾಲಯವಿದೆ. ಈಗಾಗಲೇ ಶ್ರೀಕೃಷ್ಣನ ಅದ್ಧೂರಿ ಪುರಪ್ರವೇಶ ನಡೆದಿದ್ದು, ಗ್ರಾಮ ಮಾತ್ರವಲ್ಲದೆ ಬೆಳ್ತಂಗಡಿ ತಾಲೂಕಿನ ಜನರು ಗೋವರ್ಧನಗಿರಿಧಾರಿಯನ್ನು ಕಣ್ತುಂಬಿಕೊಂಡಿದ್ದಾರೆ. ತಾಲೂಕಿನ ಪ್ರಮುಖ ಮಾರ್ಗಗಳಲ್ಲಿ ವೈಭಯುತ ಮೆರವಣಿಗೆಯ ಮೂಲಕ ಗೋಪಾಲಕೃಷ್ಣನನ್ನು ದೇವರಗುಡ್ಡೆಗೆ ಬರಮಾಡಿಕೊಳ್ಳಲಾಗಿದೆ. ಅತ್ತ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿ ಕೂಡಾ ಅಂತಿಮ ಹಂತದಲ್ಲಿದ್ದು, ನೂತನ ಪ್ರಾಸಾದಲ್ಲಿ ಗೋಪಾಲಕೃಷ್ಣನ ನೂತನ ಬಿಂಬ ಪ್ರತಿಷ್ಠೆ ಪ್ರಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ.

ಏಪ್ರಿಲ್‌ 25ರ ಶುಕ್ರವಾರದಿಂದ ಮೇ 03ರ ಶನಿವಾರದವರೆಗೆ ಒಟ್ಟು 9 ದಿನಗಳ ಕಾಲ ತೆಕ್ಕಾರಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತ...