ಭಾರತ, ಫೆಬ್ರವರಿ 29 -- ಸದ್ಯಕ್ಕೆ ನಮ್ಮಲ್ಲಿ ಶೇ 80 ರಷ್ಟು ಮಂದಿಯನ್ನು ಕಾಡುವ ಪ್ರಶ್ನೆ ಎಂದರೆ ತೂಕ ಇಳಿಸುವುದು ಹೇಗೆ ಎಂಬುದು. ಇತ್ತೀಚಿನ ಜೀವನಕ್ರಮದಲ್ಲಿ ತೂಕ ಇಳಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಏನೇನೋ ಸರ್ಕಸ್‌ ಮಾಡಿದರೂ ತೂಕ ಕಡಿಮೆ ಆಗೊಲ್ಲ. ಬಾಯಿಗೆ ರುಚಿಸಿದನ್ನು ತಿಂದ ನಂತರವೂ ತೂಕ ಇಳಿಯುವಂತಿದ್ದರೆ ಎಂಬ ಆಲೋಚನೆ ಬಹಳಷ್ಟು ಜನರಲ್ಲಿ ಬಂದಿರಬಹುದು. ಅದಕ್ಕೆ ಮೆಂತ್ಯ ಸೊಪ್ಪು ಉತ್ತಮವಾಗಿದೆ. ತೂಕ ಇಳಿಕೆ ಡಯಟ್‌ ಪ್ಲಾನ್‌ನಲ್ಲಿ ಸೇರಿಸಿಕೊಳ್ಳಬಹುದಾದ ಉತ್ತಮ ಆಹಾರವಿದು. ಮೆಂತ್ಯ ಸೊಪ್ಪು ಹಸಿರು ತರಕಾರಿಗಳಲ್ಲಿ ವಿಶಿಷ್ಟ ಪರಿಮಳ ಹೊಂದಿರುವ ಸೊಪ್ಪು. ಪೋಷಕಾಂಶಗಳ ಗಣಿಯಾಗಿರುವ ಮೆಂತ್ಯ ಸೊಪ್ಪಿನಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಸ್ವಲ್ಪ ಕಹಿ ರುಚಿ ಮತ್ತು ಗಾಢ ಪರಿಮಳ ಹೊಂದಿರುವ ಮೆಂತ್ಯ ಸೊಪ್ಪು ಭಾರತೀಯರು ಇಷ್ಟಪಡುವ ನೆಚ್ಚಿನ ತರಕಾರಿಗಳಲ್ಲೊಂದು. ಮೆಂತ್ಯ ಸೊಪ್ಪಿನಿಂದ ಸಾರು, ಪಲ್ಯ, ಪರಾಠಗಳನ್ನು ತಯಾರಿಸುತ್ತಾರೆ. ಮೆಂತ್ಯ ಸೊಪ್ಪು ಕೇವಲ ಪರಿಮಳವನ್ನಷ್ಟೇ ಹೊಂದಿಲ್ಲ ಇದು ತನ್ನೊಳಗೆ ಅನೇಕ ...