ಭಾರತ, ಏಪ್ರಿಲ್ 17 -- ಟಾಲಿವುಡ್‌ನ ನಟ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಅವರ ಇತ್ತೀಚೆಗೆ ವೈರಲ್ ಆದ ಫೋಟೊ ಒಂದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಯಾಕಂದರೆ ಆ ಫೋಟೊದಲ್ಲಿ ಗುರುತು ಸಿಗದಷ್ಟು ಬದಲಾಗಿದ್ದರು ಎನ್‌ಟಿಆರ್‌. ಮೈಕೈ ತುಂಬಿಕೊಂಡು ಫಿಟ್ ಆಗಿದ್ದ ಎನ್‌ಟಿಆರ್‌ ಈಗ ಹಲವು ಕೆಜಿ ತೂಕ ಇಳಿಸಿಕೊಂಡು ಇದ್ದಕ್ಕಿದ್ದಂತೆ ಸಣಕಲಾಗಿದ್ದಾರೆ. ಎನ್‌ಟಿಆರ್ ಫೋಟೊ ನೋಡಿದವರಿಗೆ ಇವರು ಅವರೇನಾ ಎನ್ನುವಷ್ಟು ಬದಲಾಗಿದ್ದಾರೆ. ಇದೀಗ ಎನ್‌ಟಿಆರ್ ತೂಕ ಇಳಿಕೆಯ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ.

ಜೂನಿಯರ್ ಎನ್‌ಟಿಆರ್ ಇತ್ತೀಚೆಗೆ ಹೋಟೆಲ್ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ನೀಡಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎನ್‌ಟಿಆರ್ ಇದ್ದಕ್ಕಿದ್ದಂತೆ ಹೇಗೆ ಇಷ್ಟು ತೆಳ್ಳಗಾದರು ಎಂದು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಅವರು ಓಜೆಂಪಿಕ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡುತ್ತಿವೆ.

ಎನ್‌ಟಿಆರ್ ಹೊಸ ಜೀವನಶೈಲಿಯನ್ನು ಅನುಸರಿಸುವ...