ಭಾರತ, ಮಾರ್ಚ್ 4 -- ಕಡಲೆಕಾಳು, ಸೌತೆಕಾಯಿ, ಟೊಮೆಟೊ ಇತ್ಯಾದಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಹಲವು. ಹೀಗಾಗಿ ಅನೇಕ ಜನರು ಬೆಳಗ್ಗೆ ಕಡಲೆಕಾಳು ಸಲಾಡ್ ತಿನ್ನುತ್ತಾರೆ. ಕಡಲೆಕಾಳು ಸಲಾಡ್ ಬಹಳ ರುಚಿಕರವಾಗಿರುತ್ತದೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಇದು ಬೆಸ್ಟ್ ಉಪಾಹಾರ. ಕಡಲೆಕಾಳು ಸಲಾಡ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಒಂದು ಕಪ್ ಬೇಯಿಸಿದ ಕಡಲೆಕಾಯಿ, ಅರ್ಧ ಕಪ್ ಸೌತೆಕಾಯಿ, ಅರ್ಧ ಕಪ್ ಈರುಳ್ಳಿ, ಅರ್ಧ ಕಪ್ ಟೊಮೆಟೊ, ಅರ್ಧ ಕಪ್ ಬೇಳೆಕಾಳು, ಎರಡು ಹಸಿ ಮೆಣಸಿನಕಾಯಿ, ಅರ್ಧ ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಮೊಸರು, ಎರಡು ಚಮಚ ಎಣ್ಣೆ, ನಿಂಬೆ ರಸ, ಅರ್ಧ ಚಮಚ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಕಡಲೆಕಾಳನ್ನು ರಾತ್ರಿಯಿಡೀ ನೆನೆಸಬೇಕು. ಮರುದಿನ ಬೆಳಗ್ಗೆ, ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ. ನೆನೆಸಿದ ಕಡಲೆಕಾಳನ್ನು ಬೇಯಿಸಿ. ಕಡಲೆಕಾಳು ಬೇಯಿಸಿದ ನಂತರ, ಅದರಲ್ಲಿನ ನೀರನ್ನು ಸೋಸಿ ಪ...